|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೈಸೂರು: ಸಿಐಡಿ ಡಿಎಸ್‌ಪಿ ಯಶವಂತ್‌ಗೆ ಡಿಎಸ್‌ಸಿಐ ಇಂಡಿಯಾ ಪ್ರಶಸ್ತಿ

ಮೈಸೂರು: ಸಿಐಡಿ ಡಿಎಸ್‌ಪಿ ಯಶವಂತ್‌ಗೆ ಡಿಎಸ್‌ಸಿಐ ಇಂಡಿಯಾ ಪ್ರಶಸ್ತಿ



ಮೈಸೂರು: ಕರ್ನಾಟಕ ಸಿಐಡಿಯ ಡಿವೈಎಸ್ಪಿ ಕೆ.ಎನ್. ಯಶವಂತ್‌ ಕುಮಾರ್ ಅವರಿಗೆ 2021ನೇ ಸಾಲಿನ ಪ್ರತಿಷ್ಠಿತ ಡಿಎಸ್‌ಸಿಐ ಇಂಡಿಯಾ ಸೈಬರ್ ಕಾಪ್ ಆಪ್ ದಿ ಇಯರ್ ಪ್ರಶಸ್ತಿ ಲಭಿಸಿದೆ.


ದೇಶಾದ್ಯಂತ ವಿವಿಧ ರಾಜ್ಯಗಳಿಂದ ಸೈಬರ್ ಅಪರಾಧ ಪತ್ತೆ ಮಾಡಿದ 55 ಪ್ರಕರಣಗಳನ್ನು ಪ್ರಶಸ್ತಿಗೆ ಕಳುಹಿಸಲಾಗಿತ್ತು. ಇದರಲ್ಲಿ  ಉತ್ತರಾಖಂಡ್, ಆಂಧ್ರಪ್ರದೇಶ ಹಾಗೂ ಸಿಐಡಿ ಕರ್ನಾಟಕದ ಪತ್ತೆ ಪ್ರಕರಣ ಕೊನೆ ಹಂತದಲ್ಲಿತ್ತು. ಅಂತಿಮವಾಗಿ ಸಿಐಡಿಯ ಸೈಬರ್ ಅಪರಾಧ ವಿಭಾಗದಲ್ಲಿ ಡಿವೈಎಸ್ಪಿ ಯಶವಂತ್‌ಕುಮಾರ್ ಅವರು ಪತ್ತೆ ಮಾಡಿದ ಪ್ರಕರಣ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಕರ್ನಾಟಕ ಸಿಐಡಿ ಡಿಜಿಪಿ ಪಿ.ಎಸ್.ಸಂಧು ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಕರ್ನಾಟಕದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ಕುರಿತಾಗಿ ತನಿಖೆ ನಡೆಸಿದ ಪ್ರಕರಣ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯ ದರ್ಶಿ ಅಜಯ್ ಸಹಾಯ್ ಅವರಿಂದ ಈ ಪ್ರಶಸ್ತಿಯನ್ನು ಯಶವಂತ್‌ಕುಮಾರ್ ಸ್ವೀಕರಿಸಿದರು.


ದೇಶದಲ್ಲೇ ಪ್ರತಿಷ್ಠಿತ ಪ್ರಶಸ್ತಿಯನ್ನು ಕರ್ನಾಟಕ ಪೊಲೀಸ್ ಪಡೆಯಲು ನೆರವಾಗುವ ಜತೆಗೆ ಎಂಥ ಪ್ರಕರಣವನ್ನು ಬೇಸುವಲ್ಲಿ ಕರ್ನಾಟಕ ಪೊಲೀಸರು ಸಮರ್ಥರಿದ್ದಾರೆ ಎನ್ನುವುದನ್ನು ಇದು ತೋರಿಸಿಕೊಟ್ಟಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಅಭಿನಂದಿಸಿದ್ದಾರೆ.


ಮೈಸೂರಿನ ದೇವರಾಜ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಯಶವಂತಕುಮಾರ್ ನರಸಿಂಹರಾಜ ಠಾಣೆ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಎಂಜಿನಿಯರಿಂಗ್ ಪದವೀಧರರಾದ ಯಶವಂತ್‌ಕುಮಾರ್ ರಾಜ್ಯದ ವಿವಿದೆಡೆ 2 ದಶಕದಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post