ತೀರ್ಥಹಳ್ಳಿ: ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿಯು 42 ಲಕ್ಷ , 22 ಸಾವಿರ ವಿದ್ಯುತ್ ಬಿಲ್ ಹಾಕಿ ಉಳಿಸಿಕೊಂಡಿದ್ದು ಇದೀಗ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಾರೆ.
ಇನ್ನು ಪಟ್ಟಣ ಸಮೀಪದ ಮುಳಬಾಗಿಲು ಗ್ರಾಮ ಪಂಚಾಯತ್ ಕರೆಂಟ್ ಬಿಲ್ ಕಟ್ಟದೆ ಇರುವ ಕಾರಣ ಪಂಚಾಯಿತಿಯ ಕಾರ್ಯಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೆಸ್ಕಾಂ ಇಲಾಖೆ ತನ್ನ ನಿಯಮ ಪಾಲನೆ ಮಾಡಿದೆ.
ಮೆಸ್ಕಾಂ ಇಲಾಖೆ ಅನೇಕ ಬಾರಿ ನೋಟೀಸ್ ನೀಡಿ ಹಣ ಕಟ್ಟುವಂತೆ ಸೂಚಿಸಿದರೂ ಕೂಡ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಮಾಡಿದ ಕಾರಣ ಗ್ರಾಮ ಪಂಚಾಯಿತಿಯ ಕಾರ್ಯಾಲಯದ ವಿದ್ಯುತ್ ಕಡಿತ ಮಾಡಲಾಗಿದೆ.