ಪುತ್ತೂರು: ಊರ ಜಾತ್ರೆ ಅಂತ ಬಂದಾಗ ಎಲ್ಲರೂ ಸೇರಿ ಸೇವೆ ಮಾಡುವುದು ಸಾಮಾನ್ಯ. ಜಾತ್ರೆ-ಹಬ್ಬಗಳಿಂದ ಜನರಲ್ಲಿ ಒಗ್ಗಟ್ಟು ಹೆಚ್ಚುತ್ತದೆ. ಇದರ ಜೊತೆಗೆ ಜನರೊಂದಿಗೆ ಭಾಂದವ್ಯ ಬೆಳೆಯುತ್ತದೆ. ಜಾತ್ರಾ ಸಮಯವು ಕುಟುಂಬ ಸಮೇತರಾಗಿ ಒಟ್ಟು ಸೇರಲು ಸಹಕರಿಸುತ್ತದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಹೇಳಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ 'ನಮ್ಮೂರ ಜಾತ್ರೆ' ವಿಷಯದ ಕುರಿತು ಗುರುವಾರ ಅವರು ಮಾತನಾಡಿದರು.
ಜಾತ್ರೆಗಳು ಸಾಂಪ್ರದಾಯಿಕವಾಗಿ ವಿಜೃಂಭಣೆಯಾಗಿ ನಡೆಯುವುದರ ಜೊತೆಗೆ ವೈವಿದ್ಯಮಯ ಮಾರುಕಟ್ಟೆಗಳು ಕಾಣಸಿಗುತ್ತದೆ. ಇದು ಹಲವರಿಗೆ ಉದ್ಯೋಗವನ್ನು ಕೂಡ ಸೃಷ್ಟಿ ಮಾಡುತ್ತದೆ ಎಂದರು.
ವಿದ್ಯಾರ್ಥಿಗಳಾದ ಪ್ರತೀಕ್ಷಾ ಪೂಜಾರಿ, ಹರ್ಷಿತಾ, ಸುಪ್ರಿಯಾ, ನಿಶಾ ಶೆಟ್ಟಿ, ಚೈತ್ರಾ, ನಿರೀಕ್ಷಾ, ನವ್ಯಶ್ರೀ, ತನುಶ್ರೀ, ಧೀರಜ್, ಚೈತನ್ಯಲಕ್ಷ್ಮಿ, ಪವನ್ ಕುಮಾರ್, ನೀತಾ, ಆಶಾ, ಮಂಜುನಾಥ, ರಮ್ಯ, ದೀಪ್ತಿ, ಅನನ್ಯ ಜಾತ್ರೆ ಕುರಿತಾದ ತಮ್ಮ ಅನುಭವಗಳನ್ನು ಹಂಚಿಕೊಂಡರು.
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಧೀರಜ್ ವಾರದ ಉತ್ತಮ ಮಾತುಗಾರರಾಗಿ ಹಾಗೂ ಪ್ರಥಮ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ವಾರದ ಉತ್ತಮ ಮಾತುಗಾರರ ತಂಡವಾಗಿ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ ಆರ್ ನಿಡ್ಪಳ್ಳಿ, ಉಪನ್ಯಾಸಕಿ ಸೀಮಾ ಪೋನಡ್ಕ, ಕಾರ್ಯಕ್ರಮದ ಕಾರ್ಯದರ್ಶಿ ಸಂದೀಪ್ ಮಂಚಿಕಟ್ಟೆ ಉಪಸ್ಥಿತರಿದ್ದರು. ತೃತೀಯ ಬಿಎ ವಿದ್ಯಾರ್ಥಿನಿಯರಾದ ರಸಿಕಾ ಮುರುಳ್ಯ ಸ್ವಾಗತಿಸಿ, ಕೃತಿಕಾ ಸದಾಶಿವ ವಂದಿಸಿದರು. ತನುಶ್ರೀ ಬೆಳ್ಳಾರೆ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ