|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು ವಿವಿಯಲ್ಲಿ ಕುವೆಂಪು ನೆನಪು ಇಂದು (ಡಿ.29)

ಮಂಗಳೂರು ವಿವಿಯಲ್ಲಿ ಕುವೆಂಪು ನೆನಪು ಇಂದು (ಡಿ.29)


ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ 'ಆಗು ನೀ ಅನಿಕೇತನ' ಎಂಬ ಕುವೆಂಪು ನೆನಪಿನ ಕಾರ್ಯಕ್ರಮ ಮತ್ತು ಪ್ರಸಾರಾಂಗದಿಂದ ಪ್ರಕಟಿಸಿರುವ 'ಸಾಹಿತ್ಯ ಮಂಗಳ- 1' (ಐಚ್ಛಿಕ ಕನ್ನಡ ಪದವಿ ಪಠ್ಯಪುಸ್ತಕ) ಬಿಡುಗಡೆ ಸಮಾರಂಭವು ಇಂದು (29) ಬೆಳಗ್ಗೆ 10 ಗಂಟೆಗೆ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆಯಲಿದೆ.


ಸಮಾರಂಭದಲ್ಲಿ ಉದ್ಘಾಟಕರಾಗಿ- ಪ್ರೊ. ಪಿ. ಎಸ್. ಯಡಪಡಿತ್ತಾಯ ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ ಇವರು ಭಾಗವಹಿಸಲಿದ್ದಾರೆ.


ಕುವೆಂಪು ಕುರಿತು ವಿಶೇಷ ಉಪನ್ಯಾಸವನ್ನು ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಹೆಚ್. ಜಿ. ಶ್ರೀಧರ್ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಸೋಮಣ್ಣ ಹೊಂಗಳ್ಳಿ

ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಸೋಮಣ್ಣ ಹೊಂಗಳ್ಳಿ ವಹಿಸಲಿದ್ದಾರೆ.  

.

ಕಾರ್ಯಕ್ರಮದಲ್ಲಿ ಕನ್ನಡ ಎಂ.ಎ. ವಿದ್ಯಾರ್ಥಿಗಳಿಂದ ಕುವೆಂಪು ಅವರ ಚಿಂತನೆಗಳ ಪ್ರಸ್ತುತಿ, ಕವಿತಾ ವಾಚನ, ಗಾಯನ, ನಾಟಕಗಳ ಆಯ್ದ ಭಾಗದ ಪ್ರಸ್ತುತಿಯಿದೆ. ಅಪರಾಹ್ನ 2 ರಿಂದ ಕುವೆಂಪು ಕಾದಂಬರಿ ಆಧಾರಿತ ಕಾನೂರು ಹೆಗ್ಗಡತಿ ಸಿನೆಮಾ ಪ್ರದರ್ಶನ ನಡೆಯಲಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post