ಕನ್ನಡದ ಹಿರಿಯ ನಟ ಅವಿನಾಶ್‌ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

Arpitha
0



ಬೆಂಗಳೂರು:
ಕನ್ನಡದ ಹಿರಿಯ ಮತ್ತು ಪ್ರತಿಭಾನ್ವಿತ ನಟ ಅವಿನಾಶ್ ಅವರಿಗೆ ಇಂದು 61 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಪೋಷಕ ನಟರಾಗಿ, ಖಳ ನಾಯಕರಾಗಿ ಸಿನಿಮಾರಂಗದಲ್ಲಿ ಖ್ಯಾತಿ ಹೊಂದಿರುವ ಅವಿನಾಶ್ ಅವರ ಪತ್ನಿ ಮಾಳವಿಕಾ ಅವಿನಾಶ್ ಕೂಡ ಪ್ರತಿಭಾವಂತ ನಟಿ.

ಸುಮಾರು 400 ಸಿನಿಮಾಗಳಲ್ಲಿ ನಟಿಸಿರುವ ಇವರು ಕನ್ನಡ ಮಾತ್ರವಲ್ಲದೆ ತಮಿಳು ಭಾಷೆಯ ಸಿನಿಮಾದಲ್ಲೂ ಪಾತ್ರಕ್ಕೆ ಜೀವ ತುಂಬಿದ್ದಾರೆ. " ಮಾವಳ್ಳಿ ಸರ್ಕಲ್" ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟ ಅವಿನಾಶ್ ಡಾ. ರಾಜ್ ಕುಮಾರ್ ನಿಂದ ಹಿಡಿದು ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ ಎಂಬುವುದು ಹೆಗ್ಗಳಿಕೆಯ ವಿಚಾರ.

ಮಧ್ವಾಚಾರ್ಯ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಇವರು ಇನ್ನೂ ಹೆಚ್ಚಿನ ಸಿನಿಮಾ ಮಾಡಲಿ, ಆ ಮೂಲಕ ಪ್ರೇಕ್ಷಕರನ್ನು ರಂಜಿಸಲಿ ಎಂಬುವುದು ಅಭಿಮಾನಿಗಳ ಆಶಯ....

Post a Comment

0 Comments
Post a Comment (0)
To Top