ಹೆಲಿಕಾಪ್ಟರ್‌ ದುರಂತ: ಸಿಡಿಎಸ್‌ ಜನರಲ್‌ ಬಿಪಿನ್ ರಾವತ್‌ ಇನ್ನಿಲ್ಲ; ರಾಷ್ಟ್ರಪತಿ, ಪ್ರಧಾನಿ ಸಹಿತ ಗಣ್ಯರ ಶೋಕ

Upayuktha
0

ಹೊಸದಿಲ್ಲಿ: ಇಂದು ಬೆಳಗ್ಗೆ ತಮಿಳುನಾಡಿನ ಊಟಿ ಸಮೀಪ ಸಂಭವಿಸಿದ ಸೇನಾಪಡೆ ಹೆಲಿಕಾಪ್ಟರ್‌ ದುರಂತದಲ್ಲಿ ಮೂರೂ ಪಡೆಗಳ ಮುಖ್ಯಸ್ಥರಾದ (ಸಿಡಿಎಸ್‌) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್‌ ಸಹಿತ 13 ಮಂದಿ ಸೇನಾ ಅಧಿಕಾರಿಗಳು ಮೃತಪಟ್ಟಿದ್ದಾರೆ.


ಭಾರತೀಯ ವಾಯುಪಡೆಯ ಈಗ ತಾನೇ ಈ ಬಗ್ಗೆ ಟ್ವೀಟ್ ಮಾಡಿ ಘಟನೆಯನ್ನು ದೃಢೀಕರಿಸಿದೆ.




ಕೇಂದ್ರ ಗೃಹಸಚಿವ ಅಮಿತ್ ಅವರು ಇದೀಗ ಘಟನೆ ಕುರಿತು ಟ್ವಿಟ್ ಮಾಡಿದ್ದು, ಜನರಲ್ ಬಿಪಿನ್ ರಾವತ್ ಅವರ ದುರ್ಮರಣದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ತಿಳಿಸಿದ್ದಾರೆ.



ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕೂಡ ಟ್ವೀಟ್ ಮಾಡಿದ್ದು, ಜನರಲ್ ಬಿಪಿನ್ ರಾವತ್ ಈಗ ನಮ್ಮೊಂದಿಗಿಲ್ಲ. ದೇಶದ ರಕ್ಷಣೆಗೆ ಅಪಾರ ಸೇವೆ ಸಲ್ಲಿಸಿದ ಅವರಿಗೆ ಗೌರವಪೂರ್ವಕ ನಮನಗಳು ಎಂದು ಹೇಳಿದ್ದಾರೆ.

 



ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವಿಟ್ ಮಾಡಿದ್ದು, ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಹಾಗೂ 13 ಮಂದಿ ಸೇನಾಧಿಕಾರಿಗಳ ಮರಣ ವಾರ್ತೆ ತಿಳಿದು ತೀವ್ರ ದುಃಖವಾಗಿದೆ. ಅವರು ದೇಶಕ್ಕೆ ಸಲ್ಲಿಸಿದ ಸೇವೆ ಅಪಾರ ಎಂದು ಸ್ಮರಿಸಿಕೊಂಡಿದ್ದಾರೆ.



ಭಾರತದ ಪ್ರಥಮ ಸಿಡಿಎಸ್‌ (ಮೂರೂ ಸೇನಾಪಡೆಗಳ ಏಕೀಕೃತ ಮುಖ್ಯಸ್ಥರು)  ಆಗಿ ಸೇನಾಪಡೆಗಳ ಆಧುನೀಕರಣಕ್ಕೆ ಜನರಲ್ ರಾವತ್‌ ಅವರ ಕೊಡುಗೆ ಅಪಾರ. ಭಾರತದ ರಕ್ಷಣೆಯಲ್ಲಿ ಅವರ ಸೇವೆ ಮರೆಯಲಾಗದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಶೋಕ ವ್ಯಕ್ತಪಡಿಸಿದ್ದಾರೆ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top