ಬೆಳೆಹಾನಿ: ವಿಮಾ ಸಂಸ್ಥೆಗೆ ಮಾಹಿತಿ ನೀಡಲು ಕೋರಿಕೆ

Upayuktha
0

 


ಮಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಕಾರಣ ಹಲವೆಡೆ ಬೆಳೆಹಾನಿ ಸಂಭವಿಸುತ್ತಿದೆ. ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿದ ರೈತರಿಗೆ ಬೆಳೆ ಹಾನಿ ಸಂಭವಿಸಿದ್ದಲ್ಲಿ ಪರಿಹಾರ ನೀಡಲು ಅವಕಾಶವಿದೆ. ಜಿಲ್ಲೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಭತ್ತ (ಮಳೆ ಆಶ್ರಿತ) ಮಂಗಾರು ಹಂಗಾಮಿನಲ್ಲಿ ಅಧಿಸೂಚಿತ ಬೆಳೆಯಾಗಿರುತ್ತದೆ.


ಪ್ರಸ್ತುತ ಮುಂಗಾರು ಹಂಗಾಮಿನ ಭತ್ತದ ಬೆಳೆಯು ಕಟಾವು ಹಂತದಲ್ಲಿದ್ದು, ಈ ಯೋಜನೆಯಡಿ ನೋಂದಣೆ/ ವಿಮೆ ಮಾಡಲಾದ ರೈತರ ಜಮೀನಿನಲ್ಲಿ ಮಳೆಯಿಂದಾಗಿ ಯಾವುದೇ ಬೆಳೆಹಾನಿಯಾಗಿದ್ದಲ್ಲಿ ಕೂಡಲೇ ಬೆಳೆಹಾನಿ ಸಂಭವಿಸಿದ 72 ಗಂಟೆಯೊಳಗೆ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕಾಗಿದೆ.


ಜಿಲ್ಲೆಗೆ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಬೆಳೆವಿಮೆ ಕಂಪೆನಿಯು ಯುನಿವರ್ಸಲ್ ಸೊಂಪೊ ವಿಮಾ ಸಂಸ್ಥೆ ನಿಯೋಜಿಸಲಾಗಿದ್ದು ದೂರನ್ನು ದಾಖಲಿಸಲು ಟೋಲ್ ಫ್ರೀ ಸಂ: 18002005142 ಸಂಪರ್ಕಿಸಿ ಬೆಳೆ ನಷ್ಟ ಸಂಭವಿಸಿದ ಕಾರಣ ಮತ್ತು ವಿಸ್ತೀರ್ಣದ ಮಾಹಿತಿ ನೀಡಬೇಕು.


ಹೆಚ್ಚಿನ ಮಾಹಿತಿಗೆ ಹೋಬಳಿ ರೈತ ಸಂಪರ್ಕ ಕೇಂದ್ರ/ ಮಂಗಳೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮೊ.ಸಂ: 8277931071, ಬಂಟ್ವಾಳ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮೊ.ಸಂ: 8277931072, ಬೆಳ್ತಂಗಡಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮೊ.ಸಂ: 8277931066, ಪುತ್ತೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮೊ.ಸಂ: 8277931079, ಸುಳ್ಯ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮೊ.ಸಂ: 8277931079, ಯು.ಎಸ್.ಜಿ.ಐ.ಸಿ. ವಿಮಾ ಸಂಸ್ಥೆ, ಸಂಜಯ ಸಂಕೇತ್ ಮೊ.ಸಂ: 7400446265, 7353814580 ಸಂಪರ್ಕಿಸುವಂತೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top