ಮಂಗಳೂರು ಡಿ.27: ತಾಲೂಕಿನ ಕುತ್ತೆತೂರು ಗ್ರಾಮದ ಎಂ.ಆರ್.ಪಿ.ಎಲ್. ಕಂಪೆನಿಯ ಸಿ.ಐ.ಎಸ್.ಎಫ್. ಯೂನಿಟ್‍ನಲ್ಲಿ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಡಿಗ್ಗಿ ಡಿ.ಎಸ್ (34 ವರ್ಷ) ಎಂಬವರು 2021ರ ಡಿ.20 ರಂದು ಸಿ.ಐ.ಎಸ್.ಎಫ್ ಕ್ಯಾಂಪಸ್‍ನ ಬ್ಯಾಚುಲರ್ ಬ್ಯಾರಕ್‍ನಿಂದ ಕಾಣೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ ಇಂತಿವೆ:
ನಸು ಕಪ್ಪು ಮೈ ಬಣ್ಣ, ಸಾಧಾರಣ ಶರೀರ ಹೊಂದಿದ್ದು, 165 ಸೆಂಟಿ ಮೀಟರ್ ಎತ್ತರ ಇರುತ್ತಾರೆ. ಕ್ರೀಂ ಬಣ್ಣದ ಟೀ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ.
ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ದೂ.ಸಂ: 0824-2220540, ಮೊ.ಸಂ: 9480805360, 9480802345 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಂ. 0824-2220800 ಸಂಪರ್ಕಿಸುವಂತೆ ಸುರತ್ಕಲ್, ಪೊಲೀಸ್ ಠಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ