ಅಥ್ಲೀಟ್ ಎಂ. ಆರ್ ಪೂವಮ್ಮಗೆ ಮದುವೆ

Arpitha
0




ಮಂಗಳೂರು: ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಹಾಗೂ ಒಲಂಪಿಯನ್, ಕರ್ನಾಟಕದ ಅಥ್ಲೀಟ್ ಎಂ.ಆರ್.ಪೂವಮ್ಮ ಅವರು ಕೇರಳದ ಅಥ್ಲೀಟ್ ಜಿತಿನ್ ಜೊತೆ ಬುಧವಾರ ಮಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಮಂಗಳೂರಿಗೆ ಹೊರ ವಲಯದ ಅಡ್ಯಾರ್ ಗಾರ್ಡನ್‌ನ ವಿ. ಕೆ. ಶೆಟ್ಟಿ ಸಭಾಂಗಣದಲ್ಲಿ ಕೊಡವ ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹ ನೆರವೇರಿತು. ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ.ತಮ್ಮಯ್ಯ(ರಾಜು), ತಾಯಿ ಜಾನಕಿ (ಜಾಜಿ), ಜಿತಿನ್ ಅವರ ತಾಯಿ ಜಾನ್ಸಿ ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರು, ಕ್ರೀಡಾಪಟುಗಳು ಹಾಗೂ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

ಕೊಡಗು ಮೂಲದ 31 ವರ್ಷದ ಪೂವಮ್ಮ ಅವರು 2014ರಲ್ಲಿ ಇಂಚೋನ್ ಏಷ್ಯಾಡ್‌ನಲ್ಲಿ 1 ಚಿನ್ನ, 1 ಕಂಚು ಮತ್ತು 2018 ರ ಜಕಾರ್ತ ಏಷ್ಯಾಡ್‌ನಲ್ಲಿ 2 ಚಿನ್ನ ಪದಕ ಗೆದ್ದಿದ್ದರು. ಜ.1ರಂದು ಪೂವಮ್ಮರ ಪತಿ ಜಿತಿನ್ ಅವರ ಊರು ಕೇರಳದ ತ್ರಿಶೂರಿನಲ್ಲಿ ಮತ್ತೊಂದು ಕಾರ್ಯಕ್ರಮ ನಡೆಯಲಿದೆ.

2008 ರ ಬೀಜಿಂಗ್ ಮತ್ತು 2016 ರ ರಿಯೋ ಒಲಿಂಪಿಕ್ಸ್  ರಿಲೇ ತಂಡದಲ್ಲಿ ಭಾಗವಹಿಸಿದ್ದರು. ಮಂಗಳೂರು ಒಎನ್ ಜಿ ಸಿ ಉದ್ಯೋಗಿ ಪೂವಮ್ಮ 2015 ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಏಷ್ಯಾಡ್ ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದ ಜಿತಿನ್ ಪೌಲ್ ಪುಣೆಯಲ್ಲಿ ಆದಾಯ ತೆರಿಗೆ ಅಧಿಕಾರಿಯಾಗಿದ್ದಾರೆ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top