ಡಾ. ವಾಗೀಶ್ವರೀ ಶಿವರಾಮ್ ಅವರ 'ಅಮೃತ ಬಿಂದು ಕಥಾಮಾಲಾ' ಜ.4ರಂದು ಬಿಡುಗಡೆ

Upayuktha
0


ಮಂಗಳೂರು: ವಾಗೀಶ್ವರೀ ಪ್ರಕಾಶನದ 32ನೇ ಕೃತಿ 'ಅಮೃತ ಬಿಂದು ಕಥಾಮಾಲಾ' ಜನವರಿ 4ರಂದು ಪಿವಿಎಸ್ ವೃತ್ತದ ಬಳಿ ಇರುವ, ಥಿಯೋಸೊಫಿಕಲ್ ಸೊಸೈಟಿಯ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.


ಬ್ರಹ್ಮವಿದ್ಯಾ ಸಮಾಜದ ಅಧ್ಯಕ್ಷರಾದ, ವಿದ್ವಾನ್ ತುಪ್ಪೆಕಲ್ಲು ನರಸಿಂಹ ಶೆಟ್ಟರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ವಹಿಸಲಿದ್ದಾರೆ. ಕೂಟವಾಣಿ ಪತ್ರಿಕೆಯ ಸಂಪಾದಕರಾದ ಶ್ರೀ ಪೊಳಲಿ ನಿತ್ಯಾನಂದ ಕಾರಂತರು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.


ಸ್ವಾತಂತ್ರ್ಯ ಅಮೃತೋತ್ಸವದ ಸಂಸ್ಮರಣೆಗಾಗಿ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನು ಕಥೆಗಳ ಮೂಲಕ ತಿಳಿಸಿಕೊಡಲು, ಕೃತಿ ರಚನೆ ಮಾಡಿರುವ ಡಾ। ವಾಗೀಶ್ವರಿ ಶಿವರಾಮ್, (ಪ್ರಕಾಶನದ ಅಧ್ಯಕ್ಷರು) ಸಹೃದಯ ಅಭಿಮಾನಿಗಳಿಗೆ ಕಾರ್ಯಕ್ರಮಕ್ಕೆ ಸ್ವಾಗತವಿದೆ ಎಂದು ತಿಳಿಸಿರುತ್ತಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top