ಚಿಂತಾಮಣಿ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ವತಿಯಿಂದ ಡಿಸೆಂಬರ್ 24ರಿಂದ 26ರವರೆಗೆ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಬಾಲಕ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ ಅವಳಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಬಾಲಕರ ವಿಭಾಗದ ಫೈನಲ್ಸ್ ನಲ್ಲಿ ಆಳ್ವಾಸ್ 'ಎ' ತಂಡವು ಆಳ್ವಾಸ್ 'ಬಿ' ತಂಡವನ್ನು 35-29 ಹಾಗೂ 35-28 ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಬಾಲಕಿಯರ ವಿಭಾಗದ ಫೈನಲ್ಸ್ ನಲ್ಲಿ ಆಳ್ವಾಸ್ 'ಎ' ತಂಡವು ಆಳ್ವಾಸ್ 'ಬಿ' ತಂಡವನ್ನು 35-21 ಹಾಗೂ 35-16 ನೇರ ಸೆಟ್‌ಗಳಿಂದ ಸೋಲಿಸಿ ಅವಳಿ ಪ್ರಶಸ್ತಿಯನ್ನು ಪಡೆದುಕೊಂಡಿತು.
ಬಾಲಕರ ವಿಭಾಗದ ಸೆಮಿಫೈನಲ್ಸ್ ನಲ್ಲಿ ಆಳ್ವಾಸ್ 'ಎ' ತಂಡ ಕೆ.ಆರ್.ನಗರ ತಂಡವನ್ನು 35-11 ಹಾಗೂ 35-18 ನೇರ ಸೆಟ್‌ಗಳಿಂದ ಹಾಗೂ ಆಳ್ವಾಸ್ 'ಬಿ' ತಂಡ ಸ್ಪುಟ್ನಿಕ್ ಭದ್ರಾವತಿ ತಂಡವನ್ನು 35-28 ಹಾಗೂ 35-12 ನೇರ ಸೆಟ್‌ಗಳಿಂದ ಸೋಲಿಸಿ ಫೈನಲ್ಸ್ ಪ್ರವೇಶಿಸಿದರು. ಬಾಲಕಿಯರ ವಿಭಾಗದ ಸೆಮಿಫೈನಲ್ಸ್ ನಲ್ಲಿ ಆಳ್ವಾಸ್ 'ಎ' ತಂಡಕಾಮಧೇನು ಸ್ಪೋರ್ಟ್ಸ್ ಕ್ಲಬ್ ತಂಡವನ್ನು 35-20 ಹಾಗೂ 35-12 ನೇರ ಸೆಟ್‌ಗಳಿಂದ ಹಾಗೂ ಆಳ್ವಾಸ್ 'ಬಿ' ತಂಡ ಆವೆ ಮರಿಯ ಶಿರಸಿ ತಂಡವನ್ನು 35-10 ಹಾಗೂ 35-13 ನೇರ ಸೆಟ್‌ಗಳಿಂದ ಸೋಲಿಸಿ ಫೈನಲ್ಸ್ ಪ್ರವೇಶಿಸಿದರು.
ಬಾಲಕರ ಸಬ್‌ಜೂನಿಯರ್ ವಿಭಾಗದಲ್ಲಿ ಸ್ಪುಟ್ನಿಕ್ ಭದ್ರಾವತಿ ತಂಡ ಪ್ರಥಮ ಹಾಗೂ ಸ್ವರ್ಣಾಂಬ ಹೊನ್ನುಡಿಕೆ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಬಾಲಕಿಯರ ಸಬ್‌ಜೂನಿಯರ್ ವಿಭಾಗದಲ್ಲಿ ಆಳ್ವಾಸ್ ಬಾಲಕಿಯರ ತಂಡ ಪ್ರಥಮ ಹಾಗೂ ಸ್ವರ್ಣಾಂಬ ಹೊನ್ನುಡಿಕೆ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ