|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳದಲ್ಲಿ ಭಕ್ತಾದಿಗಳಿಂದ ಅಲಂಕಾರ ಸೇವೆ

ಧರ್ಮಸ್ಥಳದಲ್ಲಿ ಭಕ್ತಾದಿಗಳಿಂದ ಅಲಂಕಾರ ಸೇವೆ

 

ಉಜಿರೆ: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಚಂದ್ರಾ ಲೇ ಔಟ್ ನಲ್ಲಿರುವ ಸಾಯಿ ಫ್ಲವರ್‌ ಡೆಕೊರರ್ಸ್ ಸಂಸ್ಥೆಯ ಆಶ್ರಯದಲ್ಲಿ ಗೋಪಾಲ ರಾವ್, ಶ್ರವಣಮೂರ್ತಿ ಮತ್ತುಆನಂದ್ ನೇತೃತ್ವದಲ್ಲಿ ಭಕ್ತರು ಧರ್ಮಸ್ಥಳಕ್ಕೆ ಬಂದು ದೇವಸ್ಥಾನ, ಬೀಡು (ಧರ್ಮಾಧಿಕಾರಿಗಳಾದ ಹೆಗ್ಗಡೆಯವರ ನಿವಾಸ) ಮೊದಲಾದ ಕಟ್ಟಡಗಳನ್ನು ಅಲಂಕಾರ ಸೇವೆ ಮಾಡಿ ಧನ್ಯತೆಯನ್ನು ಹೊಂದಿದರು.


ಕಳೆದ ಐದು ದಿನಗಳಿಂದ 45 ಮಂದಿ ಅಲಂಕಾರ ಸೇವೆಯಲ್ಲಿ ನಿರತರಾಗಿದ್ದು ಶುಕ್ರವಾರ ಸೇವೆ ಪೂರ್ಣಗೊಂಡಿದೆ. ವಿವಿಧ ಜಾತಿಯ ಹಣ್ಣುಗಳು, ಹೂಗಳು ಮತ್ತು ಪ್ರಾಕೃತಿಕವಾಗಿ ದೊರಕುವ ಎಲೆಗಳನ್ನು ಬಳಸಿ ಪ್ರಕೃತಿ-ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಲಾಗಿದೆ.


ಅಲಂಕಾರಕ್ಕೆ ಬಳಸಿದ ಹಣ್ಣುಗಳು: ದಾಳಿಂಬೆ, ಬೇಲದ ಕಾಯಿ, ಜೋಳ, ಎಳನೀರು, ಬಾಳೆಹಣ್ಣು, ಅಡಿಕೆ, ತೆಂಗು, ಕಬ್ಬು, ತೆಂಗಿನಗರಿ (ತುಳು: ಮಡಲು).


ಹೂಗಳು: ಗುಲಾಬಿ, ಸೇವಂತಿಗೆ, ಕ್ರಿಸ್‌ಅಂತೋರಿಯಂ, ಸುಗಂಧರಾಜ, ಸೇವಂತಿಗೆ, ಕಾರ್ನಿಶಿಯಾ, ಆರ್ಕಿಡ್.


ಎಲೆಗಳು: ತೆಂಗಿನಗರಿ, ಎಳೆಗರಿ, ಸೈಬ್ರೋಸ್, ಡ್ರೆಸಿನಾ.


ಪರಿಕರಗಳ ಸಂಗ್ರಹ, ಸಾಗಾಟ, ಅಲಂಕಾರ ಸೇವೆ ಇತ್ಯಾದಿಗಳನ್ನು ಭಕ್ತಾದಿಗಳೆ ಉಚಿತವಾಗಿ ಮಾಡಿದ್ದಾರೆ. ಪ್ರತಿ ವರ್ಷ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ತಾವು ದೇವಸ್ಥಾನದ ಅಲಂಕಾರ ಸೇವೆ ಮಾಡುತ್ತಿದ್ದು ತಮ್ಮ ವ್ಯವಹಾರದಲ್ಲಿ ಲಾಭದಾಯಕವಾಗಿ ಪ್ರಗತಿ ಸಾಧಿಸಿದ್ದೇವೆ. ಎಲ್ಲಕ್ಕಿಂತ ಮಿಗಿಲಾಗಿ ಮನೆಯಲ್ಲಿ ಹಾಗೂ ಮನದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಂತೋಷ ದೊರಕಿದೆ ಎಂದು ಸಾಯಿ ಫ್ಲವರ್‌ ಡೆಕೊರರ್ಸ್ ಮಾಲಕ ಗೋಪಾಲ ರಾವ್ ತಿಳಿಸಿದ್ದಾರೆ.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಲಂಕಾರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಭಕ್ತರನ್ನು ಅಭಿನಂದಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post