|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹರಕ್ಷಕರ ಸೇವೆಗೆ ಮನ್ನಣೆ ಸಿಗಲಿ: ಸೋನಾವಣೆ ಹೃಷಿಕೇಶ್ ಭಗವಾನ್

ಗೃಹರಕ್ಷಕರ ಸೇವೆಗೆ ಮನ್ನಣೆ ಸಿಗಲಿ: ಸೋನಾವಣೆ ಹೃಷಿಕೇಶ್ ಭಗವಾನ್

2021ರ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮ


ಮಂಗಳೂರು: ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ದಿನಾಂಕ 06-12-2021 ರಂದು ಬೆಳಿಗ್ಗೆ 9:00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪೆರೇಡ್ ಮೈದಾನ, ಮಂಗಳೂರು ಇಲ್ಲಿ ಗೃಹರಕ್ಷಕರ ದಿನಾಚರಣೆ ಸಮಾರಂಭವನ್ನು ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಸೋನಾವಣೆ ಹೃಷಿಕೇಶ್ ಭಗವಾನ್ ಐಪಿಎಸ್ ಇವರು ಆಗಮಿಸಿದ್ದರು.


ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು ಗೃಹರಕ್ಷಕರು ಯಾವುದೇ ಅಪೇಕ್ಷೆಯಿಲ್ಲದೆ ದಿನದ 24 ಗಂಟೆಯು ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಗೃಹರಕ್ಷಕರ ಕೆಲಸ ಶ್ರೇಷ್ಠ ಕೆಲಸ, ಬಂದೋಬಸ್ತ್ ಕರ್ತವ್ಯಗಳಲ್ಲಿ ಪೊಲೀಸರೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಾರೆ. ಅವರು ಮಾಡುವ ಕೆಲಸಗಳಲ್ಲಿ ಅವರು ತೋರುವ ಶ್ರದ್ಧೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಶ್ಲಾಘಿಸಿದರು. ಗೃಹರಕ್ಷಕರ ಸೇವೆಯನ್ನು ಸಮಾಜ ಮತ್ತು ಸರಕಾರ ಗುರುತಿಸಬೇಕು ಹಾಗೂ ಅವರ ಸೇವೆಗೆ ಸೂಕ್ತ ಮನ್ನಣೆ ಸಿಗಲಿ ಎಂದು ಹಾರೈಸಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ.ಮುರಲೀ ಮೋಹನ ಚೂಂತಾರು ಇವರು ಮಾತನಾಡಿ ಗೃಹರಕ್ಷಕದಳ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1963 ರಲ್ಲಿ ಪ್ರಾರಂಭಗೊಂಡಿತು. ಗೃಹರಕ್ಷಕರು ಪೊಲೀಸ್ ಠಾಣಾ ಕರ್ತವ್ಯ, ಬಂದೋಬಸ್ತ್ ಕರ್ತವ್ಯ, ಕೋವಿಡ್ ಮಾರ್ಷಲ್ ಕರ್ತವ್ಯ, ಚೆಕ್‌ಪೋಸ್ಟ್ ಕರ್ತವ್ಯ, ಸಾಗರ ಕವಚ, ಚುನಾವಣಾ ಕರ್ತವ್ಯ ಹಾಗೂ ಇತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.




ನಿಷ್ಕಾಮ ಸೇವೆ, ಸೇವೆಯೇ ಪರಮ ಗುರಿ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ದೇಶಕ್ಕಾಗಿ ಸೇವೆ ಸಲ್ಲಿಸುವ ಗೃಹರಕ್ಷಕದಳ ಸಂಸ್ಥೆ ಒಂದು ನಿಷ್ಕಾಮ ಸೇವೆ ನೀಡುವ ಸಂಸ್ಥೆಯಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕ ದಳಕ್ಕೆ ಸೇರಿ ದೇಶ ಸೇವೆಯಲ್ಲಿ ಭಾಗಿಯಾಗಬೇಕೆಂದು ನುಡಿದರು. ಇಂದಿನ ದಿನ ನಾವೆಲ್ಲ ಗೃಹರಕ್ಷಕರು ದೇಶಕ್ಕಾಗಿ ನಮ್ಮನ್ನು ಮಗದೊಮ್ಮೆ ಸಮರ್ಪಣಾಭಾವದಿಂದ ಸಮರ್ಪಿಸಿಕೊಳ್ಳೋಣ ಎಂದು ನುಡಿದರು.


ಈ ಸಮಾರಂಭದ ಪಥ ಸಂಚಲನವು ಪೆರೇಡ್ ಕಮಾಂಡರ್ ಶ್ರೀ ವಸಂತ್ ಕುಮಾರ್, ಬೆಳ್ಳಾರೆ ಘಟಕ ಇವರ ಮುಂದಾಳತ್ವದಲ್ಲಿ ನಡೆಯಿತು. ಮೊದಲನೇ ತುಕಡಿ ಶ್ರೀ ರಮೇಶ್ ಭಂಡಾರಿ, ಸಾರ್ಜೆಂಟ್, ಮಂಗಳೂರು ಘಟಕ, ಎರಡನೇ ತುಕಡಿ ಲೀಲಾ ಕುಕ್ಯಾನ್, ಸಾರ್ಜೆಂಟ್, ಮಂಗಳೂರು ಘಟಕ, ಮೂರನೇ ತುಕಡಿ ಶುಭ ಕುಲಾಲ್, ಗೃಹರಕ್ಷಕಿ ಮಂಗಳೂರು ಘಟಕ, ನಾಲ್ಕನೇ ತುಕಡಿ ರಾಜಶ್ರೀ, ಎ.ಎಸ್.ಎಲ್, ಮಂಗಳೂರು ಘಟಕ, ಐದನೇ ತುಕಡಿ ಶ್ರೀ ಸುನೀಲ್ ಕುಮಾರ್ ಸಾರ್ಜೆಂಟ್, ಮಂಗಳೂರು ಘಟಕ ಇವರ ನೇತೃತ್ವದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಕೋವಿಡ್ ಸಂಕಷ್ಟದ ದಿನಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಶ್ರೀ ತೀರ್ಥೇಶ್ ಪ್ರಭಾರ ಘಟಕಾಧಿಕಾರಿ ಕಡಬ, ಶ್ರೀ ಅಭಿಮನ್ಯು ರೈ, ಘಟಕಾಧಿಕಾರಿ, ಪುತ್ತೂರು ಘಟಕ, ಶ್ರೀ ದಿನೇಶ್, ಪ್ರಭಾರ ಘಟಕಾಧಿಕಾರಿ, ಉಪ್ಪಿನಂಗಡಿ ಘಟಕ, ಶ್ರೀ ಸುನೀಲ್, ಗೃಹರಕ್ಷಕ, ಉಳ್ಳಾಲ ಘಟಕ ಇವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೋನಾವಣೆ ಹೃಷಿಕೇಶ್ ಭಗವಾನ್ ಐಪಿಎಸ್ ಇವರು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಪ ಸಮಾದೇಷ್ಟರಾದ ಶ್ರೀ ರಮೇಶ್ ಇವರು ಸ್ವಾಗತ ಭಾಷಣ ಮಾಡಿದರು.


ಮಂಗಳೂರು ಘಟಕಾಧಿಕಾರಿ ಮಾರ್ಕ್ಶೇರ್ ಇವರು ಗೃಹರಕ್ಷಕರಿಗೆ ಪ್ರತಿಜ್ಞಾ ಸ್ವೀಕಾರ ಮಾಡಿಸಿ, ಯಾವುದೇ ಸಂದರ್ಭದಲ್ಲಿ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನನ್ನ ಕರ್ತವ್ಯಗಳನ್ನು ನಿರ್ಭಯದಿಂದ, ನಿಷ್ಪಕ್ಷಪಾತವಾಗಿ ದಕ್ಷತೆಯಿಂದ ನಿರ್ವಹಿಸಿ ಸಮಾಜದಲ್ಲಿ ಶಾಂತಿ ನೆಲಸುವಲ್ಲಿ ಹಾಗೂ ಜನತೆಯ ಪ್ರಾಣ ಮತ್ತು ಆಸ್ತಿಗಳಿಗೆ ರಕ್ಷಣೆ ನೀಡುವಲ್ಲಿ ನನ್ನ ಶಕ್ತ್ಯಾನುಸಾರ ಶ್ರಮಿಸುತ್ತೇನೆ ಎಂದು ಗೃಹರಕ್ಷಕರು ಪ್ರತಿಜ್ಞೆ ಮಾಡಿದರು. ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಇವರು ವರದಿ ವಾಚನ ಮಾಡಿದರು.


ಶ್ರೀ ರಾಘವೇಂದ್ರ, ಮಂಗಳೂರು ಘಟಕ ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಕಛೇರಿ ಅಧೀಕ್ಷಕರಾದ ರತ್ನಾಕರ ಇವರು ವಂದನಾರ್ಪಣೆಗೈದರು ಮತ್ತು ಜಿಲ್ಲಾ ಕಛೇರಿಯ ಸಿಬ್ಬಂದಿಗಳಾದ ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ದಲಾಯತ್ ಮೀನಾಕ್ಷಿ ಹಾಗೂ ಸುರತ್ಕಲ್ ಘಟಕದ ಘಟಕಾಧಿಕಾರಿ ರಮೇಶ್, ಬಂಟ್ವಾಳ ಘಟಕದ ಘಟಕಾಧಿಕಾರಿ ಐತಪ್ಪ, ಪುತ್ತೂರು ಘಟಕದ ಸಾರ್ಜೆಂಟ್ ಜಗನ್ನಾಥ್ ಪಿ. ಮತ್ತು ಮಂಗಳೂರು ಹಾಗೂ ಉಳ್ಳಾಲ ಘಟಕದ ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم