ಪುತ್ತೂರು: ನೂತನ ಶಿಕ್ಷಣ ಪದ್ಧತಿಯು ಕನ್ನಡಕ್ಕೆ ಪ್ರಥಮ ಪ್ರಾಮುಖ್ಯತೆ ದೊರೆತು ಸಾಮರ್ಥ್ಯದ ಹೆಬ್ಬಾಗಿಲೇ ತೆರೆದಂತಾಗಿದೆ. ಸಮಾಜದಲ್ಲಿ ಇದ್ದಂತಹ ಕನ್ನಡಕ್ಕಿರುವ ಕೀಳರಿಮೆ ಈಗ ಹೋಗಲಾಡಿಸುತ್ತಿದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಯಂ. ಹೇಳಿದರು.
ಅವರು ಕಾಲೇಜಿನ ತೃತಿಯ ಬಿಎ ಐಚ್ಚಿಕ ಕನ್ನಡದ ವಿದ್ಯಾರ್ಥಿಗಳು ಆಯೋಜಿಸಿದ 'ಸಾಹಿತ್ಯ ಮಂಟಪ' ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಶುಕ್ರವಾರ ಮಾತನಾಡಿದರು.
ಕಾರ್ಯಕ್ರಮದ ಸಂಯೋಜಕಿ ಹಾಗೂ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ. ಮಾತನಾಡಿ, ಬಹಳ ಉತ್ಸಾಹದಿಂದ ತೃತೀಯ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ಸಾಹಿತ್ಯ ಮಂಟಪವನ್ನು ಮುಂದುವರಿಸುತ್ತಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದು ನಮ್ಮಲ್ಲಿ ಸಾಹಿತ್ಯದ ಕುರಿತಾದ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿ ಎಂದು ಕಾರ್ಯಕ್ರಮದ ಆಶಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಮೈತ್ರಿ ಭಟ್ ಮಾತನಾಡಿ, ಸಾಹಿತ್ಯ ದಲ್ಲಿ ಮುಂದೆ ಹೋಗಬೇಕು ಎನ್ನುವುದಾದರೆ ಓದುವುದು ಬಹಳ ಮುಖ್ಯ ಇದರಿಂದ ಶಬ್ದ ಭಂಡಾರ ಹೆಚ್ಚಿಸಲು ಸಾಧ್ಯ ಎಂದರು.
ಯುವ ಕವಿಗಳಾದ ಮೈಥಿಲಿ ಎಸ್ ರಾವ್ (ತೃತೀಯ ಬಿ. ಕಾಂ), ಧಿರಜ್. ಪಿ (ತೃತಿಯ ಬಿ ಎ), ದೀಪ್ತಿ ಅಡ್ಡಂತಡ್ಕ (ಪ್ರಥಮ ಬಿ. ಎ), ಶುಭ್ರ ಪುತ್ರಕಳ (ದ್ವಿತೀಯ ಬಿ.ಎ), ದೀಕ್ಷಿತಾ.ಹೆಚ್. ಜಿ (ಪ್ರಥಮ ಬಿ.ಎ) ಸ್ವರಚಿತ ಕವನ, ಲೇಖನಗಳನ್ನು ವಾಚಿಸಿದರು. ಇವರಿಗೆ ಡಾ. ಮನಮೋಹನ ಯಂ. ಪುಸ್ತಕವನ್ನು ಗೌರವಾರ್ಥವಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ತೃತೀಯ ಬಿ.ಎ. ಐಚ್ಚಿಕ ಕನ್ನಡ ವಿದ್ಯಾರ್ಥಿನಿ ಸಂದೀಪ್ ಮಂಚಿಕಟ್ಟೆ ಉಪಸ್ಥಿತರಿದ್ದರು. ತೃತೀಯ ಐಚ್ಚಿಕ ಕನ್ನಡ ವಿದ್ಯಾರ್ಥಿನಿಯರಾದ ಕೃತಿಕ ಸ್ವಾಗತಿಸಿ, ಶಿವಪ್ರಿಯ ವಂದಿಸಿದರು. ಮಾನಸ ಕೆ ಡಿ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ