ಆಗುಂಬೆ ಘಾಟಿಯಲ್ಲಿ ಬಿರುಕು ಬಿಟ್ಟ ರಸ್ತೆ

Upayuktha
0

 


ಆಗುಂಬೆ: ನಿರಂತರ ಹಾಗೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಹಾಗೂ ಅದರಿಂದ ಉಂಟಾಗಿರುವ ತೊಂದರೆಯಿಂದ ಕರಾವಳಿ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. 


ಕರಾವಳಿ ಹಾಗೂ ಮಲೆನಾಡನ್ನು ಸಂಪರ್ಕಿಸುವ ಮುಖ್ಯ ರಸ್ತೆ ಆಗುಂಬೆ ಘಾಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಉಂಟಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಘಾಟಿಯಲ್ಲಿ ರಸ್ತೆ ಕುಸಿದು ಒಂದು ತಿಂಗಳ ಕಾಲ ಸಂಚಾರ ವ್ಯವಸ್ಥೆಯು ಅಸ್ತವ್ಯಸ್ತವಾಗಿತ್ತು.


ಇದೀಗ ಹೆಬ್ರಿ ಮತ್ತು ಆಗುಂಬೆಯಲ್ಲಿ ಸುರಿದ ಅತ್ಯಧಿಕ ಮಳೆಗೆ ಘಾಟಿಯ ಮಣ್ಣು ಸಡಿಲಗೊಂಡಿದೆ. ಈ ಕಾರಣದಿಂದಾಗಿ ರಸ್ತೆಯ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಇದರಿಂದ ಜನರಲ್ಲಿ ರಸ್ತೆ ಕುಸಿಯುವ ಭಯ ಕಾಡಿದೆ. 


ಈ ರಸ್ತೆಯಲ್ಲಿ ಜನರು ಆತಂಕದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಘಾಟಿಯ 12 ಮತ್ತು 13ನೇ ತಿರುವಿನ ಮಧ್ಯದ ರಸ್ತೆ ಬಿರುಕು ಬಿಟ್ಟಿದೆ. ಈ ದಾರಿಯಲ್ಲಿ ಬಹಳ ಜಾಗರೂಕತೆಯಿಂದ ಓಡಾಡಬೇಕಾಗಿದೆ.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top