|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಳ್ವಾಸ್ ನಲ್ಲಿ ರಿಮೋಟ್ ಎಜುಕೇಶನ್ ಸಿಸ್ಟಮ್ ಗೆ ಚಾಲನೆ

ಆಳ್ವಾಸ್ ನಲ್ಲಿ ರಿಮೋಟ್ ಎಜುಕೇಶನ್ ಸಿಸ್ಟಮ್ ಗೆ ಚಾಲನೆ



ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಅಕಾಡೆಮಿ ಫಾರ್ ಎಕ್ಸಲೆನ್ಸ್ ವತಿಯಿಂದ  ಆಳ್ವಾಸ್ ರಿಮೋಟ್ ಎಜುಕೇಶನ್ ಸಿಸ್ಟಮ್ (ಎ ಆರ್ ಇ ಎಸ್)ಗೆ ಸಂಸ್ಥೆಯ ಅಧ್ಯಕ್ಷ  ಡಾ. ಎಂ. ಮೋಹನ್ ಆಳ್ವ ಡಿಜಿಟಲ್ ಚಾಲನೆಯನ್ನು  ನೀಡಿದರು. Upayuktha 


ಜಾಗತಿಕವಾಗಿ ಕಾಡಿದ ಸಾಂಕ್ರಾಮಿಕ ರೋಗವು ಶೈಕ್ಷಣಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಿದೆ. ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಹಾಗೂ ಇತರ ಕೋರ್ಸ್ ಗಳಿಗೆ ಸರಿಯಾದ ತರಬೇತಿ ಸಿಗುತ್ತಿಲ್ಲ ಎನ್ನುವ ಕಾರಣದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನುರಿತ ಶಿಕ್ಷಕರು  ಆನ್ಲೈನ್ ಮುಖೇನ 8ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಫೌಂಡೇಶನ್ ಕೋರ್ಸ್, ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಕ್ರಾಶ್ ಕೋರ್ಸ್ ಹಾಗೂ ಪ್ರಶ್ನೋತ್ತರ ಮಾಲಿಕೆಯನ್ನು ಆಳ್ವಾಸ್ ರಿಮೋಟ್ ಎಜುಕೇಶನ್ ಸಿಸ್ಟಮ್ ಯೋಜನೆಯಲ್ಲಿ ಒದಗಿಸಲಾಗುತ್ತಿದೆ.  


ಈ ಯೋಜನೆಯು ಎಲ್ಲಾ ವರ್ಗದ ಜನರಿಗೂ ಸುಲಭವಾಗಿ ತಲುಪುವಂತೆ ಮಿತವಾದ ದರದಲ್ಲಿ ಗುಣಮಟ್ಟದ ಶಿಕ್ಷಣ, ನೇರ ತರಗತಿ, ಚಿತ್ರೀಕರಿಸಿದ ವಿಡಿಯೋ ತರಗತಿ, ಕಲಿಕಾ ಸಾಮಗ್ರಿ, ಪರೀಕ್ಷೆಗಳು, ದಿನನಿತ್ಯ ಅಭ್ಯಾಸ ಪ್ರಶ್ನೆ ಪತ್ರಿಕೆಗಳು, ಕಲಿಕಾ ಸಂಶಯ ನಿವಾರಣಾ ಕಾರ್ಯವನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗೆ alvas.co.in ವೆಬ್ಸೈಟ್ ನ್ನು  ಪರಿಶೀಲಿಸಬಹುದು.

ಉದ್ಘಾಟನಾ ಸಮಾರಂಭದಲ್ಲಿ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್, ಗಣಿತ ಶಿಕ್ಷಕಿ ವಿದ್ಯಾ, ಎ ಆರ್ ಇಎಸ್ ಸಂಯೋಜಕ ಪ್ರೀತಮ್ ಕ್ಯಾಸ್ಟಲಿನೊ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.  


 (ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم