ಅಗಲ್ಪಾಡಿ ಭಜನಾ ಮಂದಿರದ ಭೋಜನಶಾಲೆ ಹಾಗೂ ಸಭಾಭವನದ ಉದ್ಘಾಟನಾ ಆಮಂತ್ರಣಪತ್ರಿಕೆ ಬಿಡುಗಡೆ

Upayuktha
0


 

ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಭೋಜನ ಶಾಲೆ ಹಾಗೂ ಸಭಾಭವನದ ಉದ್ಘಾಟನಾ ಸಮಾರಂಭವು 2022 ಜನವರಿ 14,15,16 ದಿನಾಂಕಗಳಂದು ನಡೆಯಲಿರುವುದು. ಪ್ರಸ್ತುತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಗುರುವಾರ ಶ್ರೀ ಮಂದಿರದಲ್ಲಿ ಜರಗಿತು. ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು.  


ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಪ್ರಬಂಧಕ ಶಿವರಾಮ ಮಣಿಯಾಣಿ ಚೇರ್ಕೂಡ್ಲು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಶ್ರೀಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯರಾದ ತಲೇಕ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. 


ಎಂ.ಸಂಜೀವಶೆಟ್ಟಿ ಮೊಟ್ಟೆಕುಂಜ, ಪ್ರೊ.ಶ್ರೀನಾಥ್, ಜನಾರ್ದನ ಮಣಿಯಾಣಿ ಬೆದ್ರುಕೂಡ್ಲು, ಕೃಷ್ಣಮೂರ್ತಿ ಮವ್ವಾರು, ವಾರ್ಡು ಸದಸ್ಯ ಹರೀಶ್ ಗೋಸಾಡ, ಶ್ರೀನಿವಾಸ ಅಮ್ಮಣ್ಣಾಯ, ರತ್ನಾಕರ, ಜಯರಾಜ ಕುಣಿಕುಳ್ಳಾಯ, ಮಂದಿರದ ಅರ್ಚಕ ನಾರಾಯಣ ಭಟ್, ಬಾಬು ಮಣಿಯಾಣಿ ಜಯನಗರ ಮೊದಲಾದವರು ಪಾಲ್ಗೊಂಡಿದ್ದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಅಚ್ಚುತ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top