|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು ವಿವಿ: ಕನ್ನಡ ಪದವಿ ಪಠ್ಯಗಳ ಬಿಡುಗಡೆ

ಮಂಗಳೂರು ವಿವಿ: ಕನ್ನಡ ಪದವಿ ಪಠ್ಯಗಳ ಬಿಡುಗಡೆ

ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸಿದ ಪದವಿ ತರಗತಿಗಳ ಮೂರನೇ ಸೆಮಿಸ್ಟರ್  ಕನ್ನಡ ಭಾಷಾ ಪಠ್ಯಗಳ ನಾಲ್ಕು ಕೃತಿಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಬಿಡುಗಡೆಗೊಳಿಸಿದರು.  


ಬಳಿಕ ಮಾತನಾಡಿದ ಅವರು, ಸಕಾಲದಲ್ಲಿ ಕನ್ನಡ ಅಧ್ಯಯನ ಮಂಡಳಿ ಮತ್ತು ಪ್ರಸಾರಾಂಗದ ತಂಡ ಪ್ರಯತ್ನದಿಂದ ಗುಣಮಟ್ಟದ ಪಠ್ಯಗಳ ಬಿಡುಗಡೆ ಸಾಧ್ಯವಾಗಿದೆ ಎಂದರು. ಕುಲಸಚಿವ ಪ್ರೊ.ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ, ಕನ್ನಡ ಪಠ್ಯಪುಸ್ತಕ ರಚನೆಯಲ್ಲಿ ವಿಶ್ವವಿದ್ಯಾನಿಲಯದ ಕಾಲೇಜುಗಳ ಕನ್ನಡ ಅಧ್ಯಾಪಕರ ಪರಿಶ್ರಮ ಶ್ಲಾಘನೀಯ ಎಂದರು.  


ಪ್ರಸಾರಾಂಗದ ನಿರ್ದೇಶಕ ಪ್ರೊ. ಸೋಮಣ್ಣ ಹೊಂಗಳ್ಳಿ, ಸಹ ನಿರ್ದೇಶಕ ಡಾ.ಧನಂಜಯ ಕುಂಬ್ಳೆ, ಪಠ್ಯ ಪುಸ್ತಕಗಳ ಕಾರ್ಯ ನಿರ್ವಾಹಕ ಸಂಪಾದಕ ಡಾ. ಮಾಧವ ಎಂ.ಕೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಲಾಗಂಗೋತ್ರಿ, ವಿಜ್ಞಾನಗಂಗೋತ್ರಿ, ಗಣಕಗಂಗೋತ್ರಿ ಎಂಬ ಮೂರನೇ ಸೆಮಿಸ್ಟರ್ ಪದವಿ ಭಾಷಾ ಪಠ್ಯಗಳ ಬಿಡುಗಡೆ ನಡೆಯಿತು.  


ಪದವಿ ಪ್ರಥಮ ಸೆಮಿಸ್ಟರಿಗೆ ಈ ಹಿಂದಿನ ಕನ್ನಡ ಭಾಷಾ ಪಠ್ಯಗಳನ್ನು ಮುಂದುವರಿಸಲು, ಮೊದಲ ಸೆಮಿಸ್ಟರಿನ ಕನ್ನಡ ಐಚ್ಛಿಕ ಪದವಿಗೆ ಹಾಗೂ ಕನ್ನಡೇತರರಿಗೆ ಇರುವ ಕಡ್ಡಾಯ ಕನ್ನಡ ಪಠ್ಯಗಳು ಶೀಘ್ರ ತಯಾರಾಗಲಿವೆ ಎಂದು ಪ್ರೊ.ಸೋಮಣ್ಣ ತಿಳಿಸಿದರು.  


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم