ವಿವಿ ಕಾಲೇಜು: ಎನ್ಎಸ್ಎಸ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

Upayuktha
0


ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವವನ್ನು ಮಂಗಳವಾರ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನುಸೂಯ ರೈ ಮಾತನಾಡಿ, ಎನ್ಎಸ್ಎಸ್ ಘಟಕದ ಸೇವಾ ಕಾರ‍್ಯಗಳು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಎನ್ಎಸ್ಎಸ್  ಕಾರ‍್ಯಕ್ರಮದ ಅಧಿಕಾರಿ ಡಾ. ಸುರೇಶ್, “ಕರ್ನಾಟಕ ರಾಜ್ಯ ಉದಯದ ಹಿಂದೆ ಮಹೋನ್ನತ ಹೋರಾಟದ ಗಾಥೆ ಅಡಕವಾಗಿದೆ. ಅದನ್ನು ಯುವ ಜನಾಂಗ ಅರಿಯಬೇಕಿದೆ” ಎಂದರು.  


ಸಾಂಸ್ಕೃತಿಕ ಕಾರ‍್ಯಕ್ರಮದ ಅಂಗವಾಗಿ ಕನ್ನಡ ಸಮೂಹಗೀತೆ, ಭಾಷಣ, ಸ್ವರಚಿತ ಕವನ ವಾಚಿಸುವ ಮೂಲಕ ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಿದರು. .ಇದೇ ವೇಳೆ ಅಂತರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಏಕತಾ ಪ್ರತಿಜ್ಞೆ ಬೋಧಿಸಲಾಯಿತು. ಎನ್ಎಸ್ಎಸ್ ಯೋಜನಾಧಿಕಾರಿ ಗಾಯತ್ರಿ ಉಪಸ್ಥಿತರಿದ್ದರು.


ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಶರಣ್ಯ ಸ್ವಾಗತಿಸಿದರು. ವಿನ್ಯಾಸ್  ಧನ್ಯವಾದ ಸಮರ್ಪಿಸಿದರು. ಪ್ರಥಮ ಬಿ.ಎ ವಿದ್ಯಾರ್ಥಿ ಶಿವಪ್ರಸಾದ್ ಬೋಳಂತೂರು ಕಾರ‍್ಯಕ್ರಮ ನಿರ್ವಹಿಸಿದರು.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top