ಮಂಗಳೂರು: ನಗರದ 33/11ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆವಿ ಮಾರ್ಕೆಟ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಆದ ಕಾರಣ ನ.25 ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗ, ಪಿ.ಎಂ.ರಾವ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಕಟೀಲು, ಪೆರ್ಮುದೆ: ನಗರದ 220 ಕೆವಿ ಎಂ.ಎಸ್.ಇ.ಝೆಡ್ ಉಪಕೇಂದ್ರದಿಂದ ಹೊರಡುವ 11ಕೆವಿ ಕಟೀಲು ದೇವಸ್ಥಾನ, ಪೆರ್ಮುದೆ ಮತ್ತು ಬಜಪೆ ಟೌನ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆಯಿಂದ ನ.25 ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪೆರ್ಮುದೆ, ಭಟ್ರಕೆರೆ, ಕಣಿಕಟ್ಟೆ, ಹುಣ್ಸೆಕಟ್ಟೆ, ತೆಂಕ ಎಕ್ಕಾರು, ಎಕ್ಕಾರು, ಬಜಪೆ, ಕಿನ್ನಿಪದವು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ನಂದಿಕೂರು/ಮುಲ್ಕಿ: ನಗರದ 110/11 ಕೆವಿ ನಂದಿಕೂರು-ಮುಲ್ಕಿ ವಿದ್ಯುತ್ ಉಪಕೇಂದ್ರದಲ್ಲಿ ಹಾಗೂ 110 ಕೆವಿ ನಂದಿಕೂರು-ಮುಲ್ಕಿ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಾಗಾರಿ ಹಮ್ಮಿಕೊಳ್ಳಲಾಗಿದೆ.
ಆದ ಕಾರಣ 110 ಕೆವಿ ನಂದಿಕೂರು-ಮುಲ್ಕಿ ವಿದ್ಯುತ್ ಮಾರ್ಗ ಹಾಗೂ 11 ಕೆವಿ ಬಳ್ಕುಂಜೆ ವಿದ್ಯುತ್ ಮಾರ್ಗದಲ್ಲಿ ಮುಲ್ಕಿ, ಕೆ.ಎಸ್.ರಾವ್ ನಗರ, ಕೊಲ್ನಾಡು ಇಂಡಸ್ಟ್ರಿಯಲ್ ಏರಿಯಾ, ಚಿತ್ರಾಪು, ಬಪ್ಪನಾಡು, ಕುಬೆಪೂರು, ಐಕಳ, ಉಲ್ಲಂಜೆ, ಕವತ್ತಾರು, ಪಂಜಿನಡ್ಕ, ದಾಮಸ್ ಕಟ್ಟೆ, ಎಸ್ಕೋಡಿ, ಪಕ್ಷಿಕೆರೆ, ಹಳೆಯಂಗಡಿ, ಇಂದಿರಾನಗರ, 10ನೇ ತೋಕೂರು, ಪಾವಂಜೆ, ಚೇಳಾರು, ಬಳ್ಕುಂಜೆ ವಾಟರ್ ಸಪ್ಲೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ