ಅ ಲ್ಲೊಂದು ಲೋಕವಿದೆ
ಆ ಕಾಶ ಮಧ್ಯದಲಿ
ಇ ದನಾರು ತಿಳಿದಿಲ್ಲ
ಈ ಶ ಕೃಪೆ ತೋರಿದರೆ
ಉ ರಗಶಯನನಪುರಕೆ
ಊ ಹಿಸದೆ ಹೋಗುವರು
ಋ ಷಿ ಯೋಗಿಗಳ ತೆರದಿ
ಎ ನಿತು ಕಲ್ಮಶವಿರದೆ
ಏ ಕಾಂಗಿಯಾಗಿಯೇ
ಐ ಕ್ಯವಾಗಲು ಹರಿಯ
ಒ 0ದಿನಿತು ತಡೆ ಇರದ
ಓ ಟವದು ನಿಗೂಢವು
ಔ ನ್ನತ್ಯವಾದಂಥ
ಅಂ ಥ ಜೀವಿಗಳೆಲ್ಲ
ಅ ಹಮನ್ನು ತೊರೆದವರು
ಕ ರಿಯ ಹಿಡಿದ ಮಕರಿಯು
ಖ ಳನಂತೆ ಇರಲಂದು
ಗ ತಿಯ ಕಾಣಿಸಿದಂಥ
ಘ ನಶ್ಯಾಮ ಸುಂದರಾ
ಙ್ಗ ಹರಿಯ ಆ ಪುರವದು
ಚ ಕ್ರವರ್ತಿಯು ಆದ
ಛ ಲವಾದಿ ದಶರಥಗೆ
ಜ ನಿಸುತ್ತ ಅಯೋಧ್ಯೆಯ
ಝ ೦ಕಣೆಯ ನೀಗಿರುವ (ದುಃಖ)
ಞ🙏ಶ್ರೀ ರಾಮ ಪುರವದು
ಟ ೦ಗವನು ಹಿಡಿದಂದು (ಕೊಡಲಿ)
ಠ ಕ್ಕ ಅರಸರನೆಲ್ಲ
ಡ ರಾವಣೆಯಿಂದಟ್ಟಿದ (ಹೆದರಿಸಿ)
ಢ ಣಾಯಕ ಪರಶು ರಾಮ (ದಂಡನಾಯಕ)
ಣ್ಣ ನ ಮೂಲಪುರವದು
ತ ಪ್ಪು ಮಾಡಿದವರನು
ಥ ಟ್ಟೆಂದು ಪರಿಹರಿಸಿ
ದ ೦ಡಿಸಲು ಬಂದಂಥ
ಧ ರ್ಮರಕ್ಷಕನಾದ
ನ ಮ್ಮ ಕೃಷ್ಣನ ಪುರವದು
ಪ ದ್ಮನಾಭನು ತಾನು
ಫ ಣಿಶಾಹಿಯಾಗಿಯೇ
ಬ ಹುಕಾಲ ಪವಡಿಸುವ
ಭ ಯವಿರದೆ ಇರುವಂಥ
ಮ ಹಾ ಮಹಿಮಪುರವದು
ಯ ಮನ ಬಾಧೆಯು ಇರದ
ರ ಮಾಧವ ನೆಲೆಸಿರುವ
ಲ ಕುಮಿ ದೇವಿಯು ತಾನು
ವ ರಿಸಿಕೊಂಡಿರುವಂಥ
ಶ ೦ಖಪಾಣಿಯ ಪುರವದು
ಷ ಡ್ವೈರಿ ನುಸುಳದಿಹ
ಸ ತ್ಯಲೋಕವೆ ಆದ
ಹ ರಿಯ ವೈಕುಂಠದಾ
ಳ ತಿಳಿದವರೆಲ್ಲುಂಟು
ಕ್ಷ ತಿಯೆ ಇರದ ಅಕ್ಷರ
ಜ್ಞ ನ ಶಾಶ್ವತದ ಮನೆ ಅದು
ಅ ಕ್ಷರಜ್ಞನ ಪುರವದು
**********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ