ನೀಟ್ - 2021 ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಪಾರಮ್ಯ

Upayuktha
0





ಮೂಡುಬಿದಿರೆ: ಮೆಡಿಕಲ್, ಡೆಂಟಲ್ ಪ್ರವೇಶಾತಿಗಾಗಿ ನಡೆದಿದ್ದ  ನೀಟ್ ಪರೀಕ್ಷೆ 2021ರ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಾಲೇಜಿನ ವಿದ್ಯಾರ್ಥಿಗಳು ದಾಖಲೆಯ ಸಾಧನೆ ಮೆರೆದಿದ್ದಾರೆ. Upayuktha  


ಅಖಿಲ ಭಾರತ ಮಟ್ಟದ ಕೆಟಗರಿ ವಿಭಾಗದಲ್ಲಿ ವಿದ್ಯಾರ್ಥಿನಿ ಹರ್ಷಿತಾ ಗಂಗಾಧರಪ್ಪ ನಗಲೂರು 4ನೇ ರ‍್ಯಾಂಕ್ ಹಾಗೂ ಶೈಕ್ಷಾ ನಾಯಕ್ ಬಿ ಪಿ 8ನೇ ರ‍್ಯಾಂಕ್ ಪಡೆದಿದ್ದಾರೆ. 20 ವಿದ್ಯಾರ್ಥಿಗಳು 650ಕ್ಕೂ ಅಧಿಕ ಅಂಕ, 62 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ, 500ರಿಂದ 600 ನಡುವೆ 250 ವಿದ್ಯಾರ್ಥಿಗಳು, 400 ರಿಂದ 500 ನಡುವೆ 360 ವಿದ್ಯಾರ್ಥಿಗಳು, 300  ರಿಂದ 400 ನಡುವೆ 313 ವಿದ್ಯಾರ್ಥಿಗಳು ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ.


ಪರೀಕ್ಷೆಗೆ ಹಾಜರಾದ ಒಟ್ಟು 1538 ವಿದ್ಯಾರ್ಥಿಗಳಲ್ಲಿ 350ಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರಿ ಜನರಲ್ ಕೋಟಾದಡಿ ವೈದ್ಯಕೀಯ ಪದವಿ ಪ್ರವೇಶಾತಿಗೆ ಅರ್ಹರಾಗಿದ್ದಾರೆ. 500ಕ್ಕಿಂತ ಅಧಿಕ ಅಂಕಗಳಿಸಿದ 312 ವಿದ್ಯಾರ್ಥಿಗಳಲ್ಲಿ 175 ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಶಿಕ್ಷಣ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇವರಿಗಾಗಿ  ಸಂಸ್ಥೆಯು 2 ಕೋಟಿ ರೂಪಾಯಿಗಳ ಮೊತ್ತವನ್ನು ವಿನಿಯೋಗಿಸಲಾಗಿದೆ. 


ಶಶಾಂಕ್ ವಿ. ಎಂ (680),  ಸುಜ್ಞಾನ್ ಶೆಟ್ಟಿ (675), ವೃದ್ಧಿ ರೈ (671), ದೀಕ್ಷಾ ಬಿ ಜಿ (667), ರಘುನಂದನ್ (667), ಧನುಷ್ (665), ಚಂದಶ್ರೀ (663), ಹರ್ಷಿತಾ ಗಂಗಾಧರಪ್ಪ (661), ಮಯೂರಿ (661), ತೇಜಸ್ ಗೌಡ (659), ಸುಕೃತ್ (658), ನಂದನ್ (652), ಪ್ರಥ್ವಿರಾಜ್ (651),  ಶ್ರೇಯಸ್ ಗೌಡ (651), ಗಗನ್ ಎಸ್ ಕೆ (510), ವೈಭವಿ (650), ರಕ್ಷಿತ್ ಪರೀಕ್ (650), ದರ್ಶನ್ (650), ಸ್ವರೂಪ್ ರಾಜ್ (650) ಅಂಕ ಗಳಿಸಿದ ವಿದ್ಯಾರ್ಥಿಗಳು.


ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, 'ಕೊರೊನಾ ಸಮಯದಲ್ಲೂ ವಿದ್ಯಾರ್ಥಿಗಳ ನೀಟ್ ಪರೀಕ್ಷಾ ಸಾಧನೆ ಗಮನಾರ್ಹವಾದದ್ದು, ಆಳ್ವಾಸ್ ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಕ್ಕೂ ಸಮಾನವಾದ ಮಹತ್ವ ನೀಡಿ ಮೌಲ್ಯಯುತ ಶಿಕ್ಷಣ ನೀಡುತ್ತಿದೆ' ಎಂದು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ‍್ಯ ಪ್ರೊ. ಸದಾಕತ್, ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಅರಸ್,   ಜೀವಶಾಸ್ತ್ರ ವಿಭಾಗದ  ಮುಖ್ಯಸ್ಥ ಡಾ ವೆಂಕಟೇಶ್ ನಾಯಕ್,  ಹಾಗೂ ಐಐಟಿ ಸಂಯೋಜಕ ಕೌಶಲ್ ಉಪಸ್ಥಿತರಿದ್ದರು. Upayuktha


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

0 Comments
Post a Comment (0)
To Top