|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡದಿಂದ ಮಲಯಾಳಕ್ಕೆ ಸಣ್ಣ ಕಥೆಗಳ ಅನುವಾದ ಕಮ್ಮಟ

ಕನ್ನಡದಿಂದ ಮಲಯಾಳಕ್ಕೆ ಸಣ್ಣ ಕಥೆಗಳ ಅನುವಾದ ಕಮ್ಮಟಮಂಜೇಶ್ವರ: ತಪಸ್ಯ ಕೇರಳ ಎಂಬ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಜೇಶ್ವರದ ಬಾಯಿಕಟ್ಟೆಯಲ್ಲಿ ನವೆಂಬರ್ 7ರ ಭಾನುವಾರದಂದು ಒಂದು ದಿನದ ಕನ್ನಡ ಸಣ್ಣಕಥೆಗಳ ಅನುವಾದ ಕಮ್ಮಟ ಏರ್ಪಡಿಸಲಾಗಿದೆ. ಇಪ್ಪತ್ತೈದು ಮಂದಿ ಸಮಕಾಲೀನ ಕಥೆಗಾರರ ಆಯ್ದ ಇಪ್ಪತ್ತೈದು ಸಣ್ಣಕಥೆಗಳನ್ನು ಮಲಯಾಳಕ್ಕೆ ಅನುವಾದಿಸುವ ಯೋಜನೆ ಇದಾಗಿದ್ದು ಕನ್ನಡ ಮತ್ತು ಮಲಯಾಳದ ಸುಮಾರು ಅರವತ್ತು ಮಂದಿ ಅನುವಾದಕರು ಈ ಕಮ್ಮಟದಲ್ಲಿ ಭಾಗವಹಿಸಲಿದ್ದಾರೆ.


ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಅನುವಾದ ಕಮ್ಮಟವೊಂದು ಆಯೋಜನೆಗೊಂಡಿದ್ದು ಕಾಸರಗೋಡಿನ ಕನ್ನಡ ಸಂಸ್ಕೃತಿಯನ್ನು ಮಲಯಾಳಿಗರಿಗೆ ಪರಿಚಯಿಸುವ ಮತ್ತು ಆ ಮೂಲಕ ಪರಸ್ಪರ ಅರಿವು, ತಿಳಿವಳಿಕೆ ಹಾಗೂ ಭಾಷಾ ಬಾಂಧವ್ಯವನ್ನು ವೃದ್ಧಿಸುವ ಉದ್ದೇಶ ಹೊಂದಿದೆ. ಮಲಯಾಳದಿಂದ ಕನ್ನಡಕ್ಕೆ ಸಾಕಷ್ಟು ಅನುವಾದಗಳಾಗಿದ್ದು, ಕನ್ನಡದಿಂದ ಮಲಯಾಳಕ್ಕೆ ಅನುವಾದ ಆಗಿರುವುದು ಕಡಿಮೆ. ಆ ಕೊರತೆಯನ್ನು ಈ ಕಮ್ಮಟವು ನೀಗಲಿದೆ.


ಮಂಜೇಶ್ವರದ ಪ್ರಸಿದ್ಧ ವೈದ್ಯ ಹಾಗೂ ಸಾಹಿತಿ ಡಾ. ರಮಾನಂದ ಬನಾರಿ ಕಮ್ಮಟವನ್ನು ಉದ್ಘಾಟಿಸಲಿದ್ದು, ಹಿರಿಯ ಕವಿ ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾಸರಗೋಡಿನ ನಿವೃತ್ತ ಪ್ರಾಂಶುಪಾಲ ಹಾಗೂ ವಿಮರ್ಶಕ ಪ್ರೊ. ಪಿ.ಎನ್. ಮೂಡಿತ್ತಾಯ ಆಶಯ ಭಾಷಣ ಮಾಡಲಿದ್ದಾರೆ. ತಪಸ್ಯ ಕೇರಳ ಸಂಘಟನೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಬಾಲಚಂದ್ರನ್ ಕೆ. ಅಧ್ಯಕ್ಷತೆ ವಹಿಸುವರು. ತಪಸ್ಯದ ಕಣ್ಣಾನ್ನೂರು ಜಿಲ್ಲಾ ಅಧ್ಯಕ್ಷ ಪ್ರಶಾಂತಬಾಬು ಕೈತಪ್ರಂ ಅವರ ಗೌರವ ಉಪಸ್ಥಿತಿ ಇರಲಿದೆ. 


ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿಟ್ಟೆ ವಿ.ವಿ. ಸಹಕುಲಾಧಿಪತಿ ಎಂ.ಎಸ್. ಮೂಡಿತ್ತಾಯ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post