|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿಯಲ್ಲಿ ರಾ ಸ್ವ ಸಂಘದಿಂದ ದೀಪಾವಳಿ ಆಯೋಜನೆ

ಉಡುಪಿಯಲ್ಲಿ ರಾ ಸ್ವ ಸಂಘದಿಂದ ದೀಪಾವಳಿ ಆಯೋಜನೆ

ಹರಿಜನರ ಮನೆ ಮನೆಗಳಲ್ಲಿ ದೀಪ ಬೆಳಗಿದ ಪೇಜಾವರ ಶ್ರೀ



ಉಡುಪಿ: ಗುರುವಾರ ಸಂಜೆ ಉಡುಪಿ ನಗರದ ಸಮೀಪ ಬೀಡಿನಗುಡ್ಡೆಯಲ್ಲಿರುವ ಹರಿಜನ ಕಾಲೊನಿಯಲ್ಲಿ ರಾ ಸ್ವ ಸಂಘದ ಆಶ್ರಯದಲ್ಲಿ ದೀಪಾವಳಿ ವಿಶಿಷ್ಟವಾಗಿ ನೆರವೇರಿತು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾಲೊನಿಯ ಹತ್ತಾರು ಮನೆಗಳಿಗೆ ಸ್ವಯಂ ತೆರಳಿ ಹಣತೆ ದೀಪ ಬೆಳಗಿ ಮನೆಯ ಸದಸ್ಯರ ಜೊತೆ ಉಭಯ ಕುಶಲೋಪರಿ ನಡೆಸಿ ಬೆಳಕಿನ ಹಬ್ಬದ ಆಶೀರ್ವಾದಗೈದರು.


ಬಳಿಕ ಅಲ್ಲಿನ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ದೇವರ ಸಾಲಂಕೃತ ಭಾವಚಿತ್ರಗಳಿಗೆ ಮಂಗಳಾರತಿ ಬೆಳಗಿ, ಕಾಲೊನಿ ನಿವಾಸಿಗಳು ಅರ್ಪಿಸಿದ ಭಕ್ತಿ ಗೌರವವನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು. 



ನಮ್ಮ ಪೂರ್ವಜರು ಹಾಕಿಕೊಟ್ಟ ಸನಾತನ ಸಂಪ್ರದಾಯ, ಮತ್ತು ಆಚರಣೆಗಳನ್ನು ಮುಂದುವರೆಸಿಕೊಂಡು ಬರಬೇಕು. ಎಷ್ಟೇ ಕಷ್ಟ ಬಂದರೂ ದೇವರ ಸ್ಮರಣೆ ತಪ್ಪಬಾರದು. ನಮ್ಮ ನಮ್ಮ ವಿಹಿತ ಕರ್ತವ್ಯಗಳ ಜೊತೆಗೆ ಭಗವಂತನ ಕೃಪೆಗಾಗಿ ಅನುನಿತ್ಯ ಪ್ರಾರ್ಥಿಸಬೇಕು ಎಂದರು. 


ರಾಸ್ವಸಂಘವು ದೇಶಾದ್ಯಂತ ಅಸೃಶ್ಯತಾ ನಿವಾರಣೆಯ ಪ್ರಯುಕ್ತ ಹರಿಹಜನರ ಬಡಾವಣೆಗಳಲ್ಲಿ ದೀಪಾವಳಿಯಂಥಹ ಹಬ್ಬಗಳ ಆಚರಣೆಯನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು.


ಕಾಲೊನಿಯ ಮನೆಗಳ ದೇವರ ಕೋಣೆಯ ಗೋಡೆಗಳಲ್ಲಿ ಅಳವಡಿಸಲು ರಾಮ  ಕೃಷ್ಣ ಮಂತ್ರಗಳ ಫಲಕಗಳನ್ನು ಶ್ರೀಗಳು ವಿತರಿಸಿದರು.


ಕಾಲೊನಿಯ ಪ್ರಮುಖರಾದ ಜಯರಾಮ್, ಸೂರ್ಯ, ಹಿಂದೂ ರುದ್ರಭೂಮಿಯ ವ್ಯವಸ್ಥಾಪಕಿ ವನಜಾಕ್ಷಿ , ಮಾಜಿ ನಗರಸಭಾ ಸದಸ್ಯೆ ಗೀತಾ ಶೇಟ್, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸಂಧ್ಯಾ ರಮೇಶ್, ರಾಸ್ವ ಸಂ ಉಡುಪಿ ಸಂಘ ಚಾಲಕ ಡಾ ನಾರಾಯಣ ಶೆಣೈ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ, ನವೀನ್, ಅಜಿತ್ ಪೈ, ಕೃಷ್ಣ ಭಟ್ ಮೊದಲಾದವರು ಸಹಕರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post