ಮಣಿಕರ್ಣಿಕ ಮಾತುಗಾರರ ವೇದಿಕೆಯ ಪ್ರಥಮ ಕಾರ್ಯಕ್ರಮ

Upayuktha
0


ಮಾತಿಗಿಂತ ಮೌನಕ್ಕೆ ಹೆಚ್ಚಿನ ಶಕ್ತಿ ಇದೆ : ಡಾ.ಎಚ್.ಜಿ .ಶ್ರೀಧರ್


ಪುತ್ತೂರು: ಮಾತು ಮತ್ತು ಮೌನದ ನಡುವೆ ಮೌನಕ್ಕೆ ಹೆಚ್ಚಿನ ಶಕ್ತಿ ಇದೆ. ನಾವು ಆಡುವ ಮಾತಿನಲ್ಲಿ ತಂಪಾದ ತಂಗಾಳಿಯೊಂದಿಗೆ ಸೂರ್ಯೋದಯದ ಹೊಂಬಣ್ಣವಿರಬೇಕು ಎಂದು ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ.ಶ್ರೀಧರ್ ಹೇಳಿದರು.


ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಬಿ.ಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕ ಮಾತುಗಾರರ ವೇದಿಕೆಯ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಗುರುವಾರ ಮಾತನಾಡಿದರು.


ಬದುಕಿನ ಪ್ರಸ್ಥಾನ ಈಗ ಆರಂಭವಾಗಿದೆ. ನಮ್ಮ ಆಸಕ್ತಿಯ ವಿಷಯ ನಮ್ಮ ಆಯ್ಕೆ. ಅದಕ್ಕೆ ಪೂರಕವಾದ ಕೌಶಲ್ಯಗಳನ್ನು ಮತ್ತು ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಪತ್ರಿಕೋದ್ಯಮದಲ್ಲಿ ಬರವಣಿಗೆ ಹಾಗೂ ಮಾತುಗಾರಿಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಹೊಂದಿದೆ. ಅನುಭವಗಳನ್ನು ಪಡೆಯಲು ಪತ್ರಿಕೋದ್ಯಮದಲ್ಲಿ ಬಹಳಷ್ಟು ಅವಕಾಶಗಳಿವೆ. ಅವುಗಳನ್ನು ಬಳಸಿಕೊಂಡು ಜೀವನದಲ್ಲಿ  ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಹೊಂದಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ.ಪಿ.ಆರ್. ನಿಡ್ಪಳ್ಳಿ ಮಾತನಾಡಿ, ಪುಸ್ತಕ ಮತ್ತು ಪೆನ್ನು ಪತ್ರಿಕೋದ್ಯಮದ ಅಂಗವಾಗಿದ್ದು ಪತ್ರಿಕೋದ್ಯಮದಲ್ಲಿ ನಿರಂತರವಾಗಿ ಮುಂದುವರೆಯುವುದರ ಜೊತೆಗೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.


ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕಿ ಸೀಮಾ ಪೋನಡ್ಕ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮ್ಮ ಸಭಾ ಕಂಪನವನ್ನು ಹೋಗಲಾಡಿಸಲು ಮಣಿಕರ್ಣಿಕ ಮಾತುಗಾರರ ವೇದಿಕೆ ಉತ್ತಮ ಅವಕಾಶವನ್ನು ನೀಡುತ್ತದೆ. ಎಲ್ಲಾ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ತಮ್ಮ ಪರಿಚಯದೊಂದಿಗೆ ಜೀವನದ ಗುರಿಯನ್ನು ಹಂಚಿಕೊಂಡರು. ತೃತೀಯ ವರ್ಷದ ಬಿ.ಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಥಮ ವರ್ಷದ ಬಿ.ಎ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪುಸ್ತಕ ಹಾಗೂ ಪೆನ್ನನ್ನು ನೀಡಿ ಪತ್ರಿಕೋದ್ಯಮ ಕಲಿಕೆಗೆ ಸ್ವಾಗತಿಸಿದರು.  


ಕಾರ್ಯಕ್ರಮದಲ್ಲಿ ಹಿಂದಿ ಉಪನ್ಯಾಸಕಿ ಪೂಜಾ ವೈ.ಡಿ, ಕನ್ನಡ ಉಪನ್ಯಾಸಕಿಯರಾದ ಡಾ.ಗೀತಾ ಕುಮಾರಿ ಟಿ ಹಾಗೂ ಮೈತ್ರಿ ಭಟ್, ಹಿರಿಯ ವಿದ್ಯಾರ್ಥಿಗಳಾದ ಸುತನ್ ಕೇವಳ ಮತ್ತು ಕಾರ್ತಿಕ್ ಹುದೇರಿ, ಮಣಿಕರ್ಣಿಕ ಕಾರ್ಯಕ್ರಮದ ಕಾರ್ಯದರ್ಶಿ ಸಂದೀಪ್ ಎಸ್ ಮಂಚಿಕಟ್ಟೆ ಉಪಸ್ಥಿತರಿದ್ದರು.


ತೃತೀಯ ಬಿ.ಎ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಶ್ರೀರಾಮ ಕೆ ಸ್ವಾಗತಿಸಿ, ತನುಶ್ರೀ ಬೆಳ್ಳಾರೆ ವಂದಿಸಿದರು. ಮಣಿಕರ್ಣಿಕಾ ಕಾರ್ಯಕ್ರಮದ ಕಾರ್ಯದರ್ಶಿ ಕೃತಿಕಾ ಸದಾಶಿವ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top