ಉಡುಪಿಯ ಪ.ಜಾತಿ ವಿದ್ಯಾರ್ಥಿಗಳಿಗೆ ಬಹುಮಾನ ಹಣ (Prize money) ಮಂಜೂರು

Upayuktha
0



ಉಡುಪಿ: ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪ.ಜಾತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕೆಳಕಂಡಂತೆ ಬಹುಮಾನ ಹಣ ಮಂಜೂರು ಮಾಡಲಾಗುತ್ತಿದೆ. ದ್ವಿತೀಯ ಪಿ.ಯು.ಸಿ. (ರೂ.20000), ಅಂತಿಮ ಪದವಿ ತರಗತಿ (ರೂ.25000), ಎಲ್ಲಾ ತರಹದ ಸ್ನಾತಕೋತ್ತರ ಪದವಿ (30000), ವೃತ್ತಿ ಶಿಕ್ಷಣ (ಉದಾ: ಬಿ.ಇ. ಮೆಡಿಕಲ್ , ರೂ.35000)


ಬಹುಮಾನ ಹಣ ಮಂಜೂರಾತಿಗಾಗಿ ಆನ್‌ಲೈನ್ ಮುಖಾಂತರ www.sw.kar.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಯು ಅರ್ಜಿಯನ್ನು ಪ್ರಾಂಶುಪಾಲರಿಂದ ಧೃಢೀಕರಿಸಿಕೊಂಡು ಜಿಲ್ಲಾ ಸಮಾಜ ಕಲ್ಯಾಣ ಕಛೇರಿಗೆ ದಾಖಲೆಗಳನ್ನು ಸಲ್ಲಿಸುವುದು.


ಉಡುಪಿ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 629 ವಿದ್ಯಾರ್ಥಿಗಳಿಗೆ ಒಟ್ಟು ರೂ. 142.15 ಲಕ್ಷ ಬಹುಮಾನ ಹಣ ಮಂಜೂರು ಮಾಡಲಾಗಿದೆ.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top