ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ತಕ್ಷಶಿಲಾ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಕೃಷ್ಣ ಪ್ರಸಾದ್ ನಡುಸಾರು ಮಾತನಾಡಿ ಅಂತರಂಗ ಶುದ್ಧವಾಗಿದ್ದರೆ ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಬಂಧುಪ್ರೇಮ, ದೇಶ ಪ್ರೇಮದಂಥ ಉತ್ತಮ ಉದಾತ್ತ ಆಲೋಚನೆಗಳಿಗೆ ಬದುಕನ್ನು ಬದಲಿಸುವ ಶಕ್ತಿ ಇದೆ. ದೇಹ ಮನಸ್ಸುಗಳ ನಡುವಿನ ಕೊಂಡಿ ಕಳಚಿಕೊಳ್ಳದಂತಿರಬೇಕು. ಪ್ರಾಣಾಯಾಮ, ಯೋಗಾಭ್ಯಾಸಗಳ ನೆರವಿನಿಂದ ಚಿಂತೆಯಿಲ್ಲದ ಅತಿಶ್ರೇಷ್ಠ ಮನಸ್ಥಿತಿಯನ್ನು ಸಾಧಿಸಬೇಕು. ನಮ್ಮ ಚಲನೆ ಸದಾ ಮೇಲ್ಮುಖವಾಗಿದ್ದು ಯಶಸ್ಸು ನಮ್ಮನ್ನು ಹಿಂಬಾಲಿಸುವಂತಿರಬೇಕು. ಮಾನವೀಯ ಸಂಬಂಧಗಳಿಗೆ ಮಹತ್ವವನ್ನು ನೀಡಿ ಸತ್ಪಥದಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ವಸತಿ ನಿಲಯದ ಅಧ್ಯಕ್ಷ ರಮೇಶ ಪ್ರಭು, ಕಾರ್ಯದರ್ಶಿ ಶಿವಕುಮಾರ ಉಪಸ್ಥಿತರಿದ್ದರು. ವಸತಿ ನಿಲಯದ ಮುಖ್ಯ ನಿಲಯ ಪಾಲಕ ಗೋವಿಂದ ರಾಜ್ ಶರ್ಮ ಅತಿಥಿಗಳನ್ನು ಸ್ಯಾಗತಿಸಿ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ