ಬೀಡಿ, ಗಣಿ, ಸಿನೆಮಾ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

Chandrashekhara Kulamarva
0

ಮಂಗಳೂರು: ಕೇಂದ್ರ ಸರಕಾರದ ಕಾರ್ಮಿಕ ಕಲ್ಯಾಣ ಇಲಾಖೆ ವತಿಯಿಂದ ಬೀಡಿ, ಗಣಿ ಹಾಗೂ ಸಿನೆಮಾ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.


ವಿದ್ಯಾರ್ಥಿವೇತನವು 1 ರಿಂದ ಡಿಗ್ರಿ ಮಟ್ಟದವರೆಗೆ 250 ರೂ.ಗಳಿಂದ ಮೂರು ಸಾವಿರದವರೆಗೆ, ಐಟಿಐ ಕೋರ್ಸ್ ಗಳಿಗೆ 10 ಸಾವಿರ ಹಾಗೂ ವೃತ್ತಿ ಪರ ಶಿಕ್ಷಣಕ್ಕೆ 15 ಸಾವಿರ ರೂ.ಗಳನ್ನು ನೀಡಲಾಗುವುದು. ಈ ಮೊತ್ತವು ಬೀಡಿ ಕಾರ್ಮಿಕ ಮಕ್ಕಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ.


ಅರ್ಜಿ ಸಲ್ಲಿಕೆಗೆ - ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ (1 ರಿಂದ 10ನೇ ತರಗತಿ) ಇದೇ ನವೆಂಬರ್ 15 ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ನ.30 ಕೊನೆಯ ದಿನವಾಗಿದೆ.


ಶಾಲಾ ಮುಖ್ಯಸ್ಥರು ವಿದ್ಯಾರ್ಥಿಗಳ ಅರ್ಜಿಯನ್ನು ಪರಿಶೀಲಿಸಿ, ಶಿಫಾರಸು ಮಾಡಲು ಡಿಸೆಂಬರ್ 15 ಕೊನೆಯ ದಿನ. ರಾಜ್ಯ ನೋಡಲ್ ಅಧಿಕಾರಿಯಿಂದ ಪರಿಶೀಲನೆ ಮಾಡಲು ಡಿಸೆಂಬರ್ 31 ಕೊನೆಯ ದಿನವಾಗಿದೆ.


ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ. ಎನ್‌ಎಸ್‌ಪಿಯಲ್ಲಿ ಅರ್ಜಿ ಸಲ್ಲಿಸಲು ಯಾವುದೇ ವಿವರಣೆ ಬೇಕಾದರೆ ಹೆಲ್ಪ್ ಡೆಸ್ಕಿಗೆ msp.gov.in ಸಂಪರ್ಕಿಸಬಹುದು. ಅರ್ಜಿ ಸಲ್ಲಿಕೆಗೆ ಇ-ಮೇಲ್ ವಿಳಾಸ welwoblr-ka@nic.in ವೆಬ್‌ಸೈಟ್ http:/scholarship.gov.in ಸಂಪರ್ಕಿಸಬಹುದು ಎಂದು ಕಾರ್ಮಿಕ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 (ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top