|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಛೇ, ಈ ಸುದ್ದಿ ಸುಳ್ಳಾಗಬಾರದಿತ್ತಾ!!?

ಛೇ, ಈ ಸುದ್ದಿ ಸುಳ್ಳಾಗಬಾರದಿತ್ತಾ!!?


ನಿಜ, ಕೆಲವರು ಹೀಗೆ ಅಛಾನಕ್ ಆಗಿ ಬಾರದ ಲೋಕಕ್ಕೆ ಹೋದಾಗ ಮನಸ್ಸಿಗೆ ಏನೋ ಒಂತರಹ ಸಂಕಟ  ಆಗುತ್ತೆ. 'ಛೇ, ಈ ಸುದ್ದಿ ಸುಳ್ಳಾಗಬಾರದಾ' ಅಂತ ಅನಿಸುತ್ತೆ.


ಸಿನಿಮಾದ ತೆರೆಯ ಮೇಲೇ ಪುನೀತ್‌ರಂತವರು ಸಾಯುವ ದೃಶ್ಯದಲ್ಲಿ ಕಂಡರೇ ಕಣ್ಣು ಒದ್ದೆಯಾಗುತ್ತೆ, ಗಂಟಲು ಒಣಗಿದಂತಾಗುತ್ತದೆ.  ಇನ್ನು ನಿಜವಾಗಿ ಅವರು ಹೋದರು ಅಂದಾಗ..... ಏನೋ ಬೇಸರ.... ಛೇ, ಯಾಕೆ ಹೀಗೆಲ್ಲ? ಅಂತ ಅನಿಸುತ್ತೆ.  


ನಟಿಸುತ್ತ ನಗಿಸಿದವರು, ನಟನೆಯಲ್ಲೇ ಅಳಿಸಿದವರು, ಮಾತಾಡಿ ಮನಸ್ಸು ಗೆದ್ದವರು, ಒಳಗೆ ಉಳಿದವರು, ಕುಣಿದು ಹೃದಯ ಕದ್ದವರು, ನೇರವಾಗಿ ನೋಡದೇ ಇದ್ದರೂ ಆಪ್ತರಾದವರು,  ಹಿಡಿಸಿದವರು, ಏಕವಚನಕ್ಕೆ ಸಿಗುವಷ್ಟು ದೊಡ್ಡ ಎಂತದೋ ಪ್ರೀತಿಗೆ ಪಾತ್ರನಾದವ!! ಅವನಿನ್ನು ಉಸಿರಾಡುವುದಿಲ್ಲ, ಭೌತಿಕವಾಗಿ ಇನ್ನು ಇರುವುದಿಲ್ಲ, ಕಾಣದಂತೆ ಮಾಯವಾದ- ಕೈಲಾಸ ಸೇರಿಕೊಂಡ ಅನ್ನುವಾಗ ಮತ್ತೆ ಅದೆ...ಛೇ, ಯಾಕೆ ಹೀಗೆಲ್ಲ? ಅಂತ ಅನಿಸುವುದು.

**

ಇನ್ನು ಅತಿಯಾದ ಜಿಮ್, ಹೈಟೆಕ್ ಫುಡ್, ಹವಾನಿಯಂತ್ರಿತ ಕೊಟಡಿ, ಹವಾನಿಯಂತ್ರಿತ ಕಾರುಗಳು, ರೆಗ್ಯುಲರ್ ಜಂಕ್ ಫುಡ್‌ಗಳು, ಮಾಲಿನ್ಯದ ವಾತಾವರಣದಲ್ಲಿನ ಜೀವನ, ಒತ್ತಡಗಳು, ಅರಿವಿಲ್ಲದೆ ಬಳಸುವ ಸ್ಲೋ ಪಾಯಿಸನ್ ರಾಸಾಯನಿಕಗಳು, (ಪೇಸ್ಟ್, ಸೋಪು, ಕಾಸ್ಮೆಟಿಕ್, ವಿನೇಗರ್, ಟೇಸ್ಟಿಂಗ್ ಪೌಡರ್, ಪ್ರಿಸರ್ವೇಟಿವ್.....), ಶ್ರಮ ರಹಿತ ಬದುಕು....... ಎಲ್ಲ ಒಟ್ಟಾಗಿ ಎಲ್ಲರ ಸಾವಿನ ದಿನಾಂಕಗಳನ್ನು ಬದಲಿಸುತ್ತಿವೆಯಾಂತ? ಪುನೀತ್ ಅಕಾಲಿಕ ಮರಣಕ್ಕೂ ಇದರಲ್ಲಿನ ಯಾವುದೋ ಒಂದು ಕಾರಣ ಇರಬಹುದಾ?

ಪುನೀತ್ ರಾಜ್‌ಕುಮಾರ್ ಅತ್ಮ ಸದ್ಗತಿಯನ್ನು ಪಡೆಯಲಿ. 


ಅಲ್ಲ, ಮರುಜನ್ಮವೇ ನಿಯಮವಾಗಿ ಇರುವುದಾದರೆ, ಮಹನೀಯ ವ್ಯಕ್ತಿಯಾಗಿ ಅವ ಮತ್ತೆ ಹುಟ್ಟಿ ಬರಲಿ, ಅಲ್ವಾ?


-ಅರವಿಂದ ಸಿಗದಾಳ್, ಮೇಲುಕೊಪ್ಪ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم