ಉಡುಪಿ: ನೃತ್ಯ ನಿಕೇತನ ಕೊಡವೂರು ವತಿಯಿಂದ ಮೂರನೇ ವರುಷದ "ಕೃಷ್ಣ ಪ್ರೇಮ" ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೊಡವೂರಿನ ವಿಪ್ರಶ್ರೀ ಸಭಾಂಗಣದಲ್ಲಿ ಇಂದು (ನ.19) ಸಂಜೆ 6-30 ರಿಂದ ನಡೆಯಲಿದೆ. ನಾಲ್ಕು ವಿವಿಧ ಕ್ಷೇತ್ರದ ಸಾಧಕರಾದ ಮಧೂರು ಬಾಲಸುಬ್ರಹ್ಮಣ್ಯಂ (ಶಾಸ್ತ್ರೀಯ ಸಂಗೀತ), ಕೆ. ರಾಮಮೂರ್ತಿ ರಾವ್ ಮೈಸೂರು (ಭರತನಾಟ್ಯ), ಕೆ.ರಾಘವೇಂದ್ರ ಭಟ್ (ರಂಗಸಂಗೀತ), ಯು. ಸೋಮನಾಥ್ (ವರ್ಣಾಲಂಕಾರ) ಕಲಾ ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪ್ರದಾನ ಮಾಡುವವರು ಗಣಕ ಯಂತ್ರದ ಕೀಲಿಮಣೆಯ ಕರ್ತೃಗಳಾದ ಕೆ.ಪಿ.ರಾಯರು. ಅತಿಥಿಗಳಾಗಿ ಉದ್ಯಮಿಗಳಾದ, ಕಲಾಪೋಷಕರಾದ ವಿಶ್ವನಾಥ್ ಶೆಣೈ ಮತ್ತು ಕೊಡವೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಮತ್ತು ಮತ್ಸ್ಯೋದ್ಯಮಿಗಳಾದ ಸಾಧು ಸಾಲಿಯಾನ್ ರವರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ನೃತ್ಯ ನಿಕೇತನ ಸಂಸ್ಥೆಯ ಹೆಮ್ಮೆಯ ಕಲಾವಿದೆ ವಿದುಷಿ ಅನಘಶ್ರೀಯವರಿಂದ "ನೃತ್ಯಗಾಥಾ" ಏಕವ್ಯಕ್ತಿ ರಂಗಪ್ರಯೋಗದ ಪ್ರದರ್ಶನ ನಡೆಯಲಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ