ಮೂಡುಬಿದಿರೆ: ಪದವಿ ಪತ್ರಿಕೋದ್ಯಮ ವಿಭಾಗದಿಂದ ಪಿನಾಕಲ್ ಪರ್ಫಾಮರ್ಸ್ ಸಾಧಕರ ಸರಣಿ ಸಂಚಿಕೆ ಬಿಡುಗಡೆ

Upayuktha
0


ವಿದ್ಯಾಗಿರಿ (ಮೂಡುಬಿದಿರೆ): ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹಾಗೂ ಕಲಿಕೆಯಲ್ಲಿ ಹೊಸತನ ಇರಬೇಕು. ಬರಿಯ ಪುಸ್ತಕ ದಿಂದ ಜ್ಞಾನ ಸಂಪಾದನೆ ಮಾಡುವುದಲ್ಲ, ಅದರೊಂದಿಗೆ ಪ್ರಾಯೋಗಿಕ ಕಲಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಪತ್ರಿಕೋದ್ಯಮ ವಿಭಾಗ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ರೂಪಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರತಿಯೊಬ್ಬ ವಿದ್ಯಾರ್ಥಿಯು ಇಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಲಿಕೆಯ ಪರಿಧಿಯನ್ನು ಹೆಚ್ಚಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. 


ಇವರು ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ಆಳ್ವಾಸ್ ಮೃದಮ್‍ನ ನೂತನ ಸಾಧಕರ ಸರಣಿ ಕಾರ್ಯಕ್ರಮ ಪಿನಾಕಲ್ ಪರ್ಫಾರ್ಮರ್ಸ್ ನ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು.  


ಆಳ್ವಾಸ್ ಮುೃದಮ್- ಪಾಡ್‍ಕಾಸ್ಟ್ ಪದವಿ ಪತ್ರಿಕೋದ್ಯಮ ವಿಭಾಗದ ನೂತನ ಪ್ರಯತ್ನವಾಗಿದ್ದು, ವಿಭಾಗದ ಅಫಿಶಿಯಲ್ ಸಾಮಾಜಿಕ ಜಾಲತಾಣದ ಪೇಜ್‍ಗಳಲ್ಲಿ ಲಭ್ಯವಿರಲಿದೆ.


ಈ ಸಂದರ್ಭದಲ್ಲಿ ಪದವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ರೇಷ್ಮಾ ಉದಯ್ ಕುಮಾರ್, ಪತ್ರಿಕೋದ್ಯಮ ಉಪನ್ಯಾಸಕಿ ರಕ್ಷಿತಾ ಕುಮಾರಿ ತೋಡಾರು, ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ವೈಶಾಖ್ ಮಿಜಾರು, ಕಿಶನ್, ಪವನ್, ಗ್ರೇಶಲ್, ಪ್ರಿಯಾಂಕ, ಸೃಷ್ಟಿ, ಮರಿಯಮ್, ಗುಣೇಶ್ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top