ಸುಮಾರು 40 ಎಕರೆ ಪ್ರದೇಶದಲ್ಲಿ 1921ರ ನವೆಂಬರ್ 18ರಂದು ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಲಲಿತಮಹಲ್ ಅರಮನೆಯನ್ನು ಲಂಡನ್‌ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಿಸಿದ್ದರು.
ಲಲಿತ್ ಮಹಲ್ ಅರಮನೆಯನ್ನು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅತಿಥಿಗಳು, ಬೇರೆ ರಾಜರುಗಳ ವಾಸ್ತವ್ಯಕ್ಕಾಗಿ ನಿರ್ಮಾಣ ಮಾಡಿದ್ದರು. ಆರಂಭದಲ್ಲಿ ಅಂದಿನ ವೈಸ್ ರಾಯ್‌ಗಳಿಗೆ ಅತಿಥಿ ಗೃಹವಾಗಿ ಕೇವಲ 13 ಲಕ್ಷ ವೆಚ್ಚದಲ್ಲಿ ಲಲಿತ್ ಮಹಲ್ ತಲೆ ಎತ್ತಿತು.
1974ರಲ್ಲಿ ಪಾರಂಪರಿಕ ಹೋಟೆಲ್ ಲಲಿತ್ ಮಹಲ್ ಆಗಿ ಮಾರ್ಪಾಡಾಗಿತ್ತು. 2018 ರಿಂದ ಲಲಿತ್ ಮಹಲ್ ಅರಮನೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಘಟಕವಾದ ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳು ನಿರ್ವಹಣೆ ಮಾಡುತ್ತಿವೆ. ಮೈಸೂರು ಸಂಸ್ಥಾನದ ಇತಿಹಾಸವನ್ನು ಸಾರುವಲ್ಲಿ ಲಲಿತ್ ಮಹಲ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಲಲಿತ್ ಮಹಲನ್ನು ನಿರ್ವಹಿಸುತ್ತಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ