ಮಂಡ್ಯ ಜಿಲ್ಲೆಯ ಶಾಸಕ ಎಂ.ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ನಾಡಿನ ಹಿರಿಯ ಸಾಹಿತಿಗಳಾದ ಬಿ.ಆರ್ ಲಕ್ಷ್ಮಣ ರಾವ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಪಿ.ಎಂ.ಜೆ.ಫ್, ಲಯನ್ ಡಾ. ನಾಗರಾಜ್ ವಿ ಭೈರಿ ಆಶಯ ನುಡಿಗಳನ್ನಾಡಲಿದ್ದಾರೆ. ಪಿ.ಎಂ.ಜೆ.ಎಫ್ ಹಾಗೂ ಮೊದಲ ಉಪರಾಜ್ಯಪಾಲೆ ಶ್ರೀ ವಿದ್ಯಾ ಇವರು ಸಾಧಕರನ್ನು ಅಭಿನಂದಿಸಿ ಗೌರವಿಸುವರು.
ಬಸಣ್ಣಿ ಬಾ ಹಾಡಿನ ಖ್ಯಾತಿಯ ಹಿನ್ನಲೆ ಗಾಯಕಿ ವರ್ಷಾ ಸುರೇಶ್, ಲಯನ್ಸ್ ಸಾಂಸ್ಕೃತಿಕ ರಾಯಭಾರಿ ಲ. ಬಿ.ಎಂ ಅಪ್ಪಾಜಪ್ಪ, ರಾಗರಂಜಿನಿ ಶಾಲೆಯ ಅಧ್ಯಕ್ಷೆ ಕಲಾಶ್ರೀ ವಿದ್ಯಾಶಂಕರ್, ಬೆಂಗಳೂರಿನ ನಿವೃತ್ತ ನೌಕರ ಭಾಸ್ಕರ ರೆಡ್ಡಿ, ಕ.ರಾ.ರ.ನೌ.ಸಂ ಇದರ ಎನ್.ಆರ್.ರವಿ ನಲ್ಲಹಳ್ಳಿ, ಕರಾಟೆಯಲ್ಲಿ ನೋಬಲ್ ವಲ್ಡ್ ರೆಕಾರ್ಡ್ ಮಾಡಿರುವ ಆರ್.ಹಂಸಪ್ರಿಯ ಹಾಗೂ ಕರಾಟೆ ಪಟು ಎಲ್. ವೈಷ್ಣವಿ ಗೌರವ ಅಭಿನಂದನೆಯನ್ನು ಸ್ವೀಕರಿಸಲಿದ್ದಾರೆ.
ಮಂಡ್ಯದ ಟೌನ್ ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್, ನಗರ ಸಭೆ ಅಧ್ಯಕ್ಷ ಹೆಚ್.ಎಸ್ ಮಂಜು, ಜಿಲ್ಲಾ ಲಯನ್ಸ್ ಮುಖಂಡ ಮಾದೇಗೌಡ, ನಗರಸಭೆ ಸದಸ್ಯೆ ಮಂಜುಳ ಉದಯಶಂಕರ್, ಇನ್ನೋರ್ವ ನಗರ ಸಭೆ ಸದಸ್ಯ ಎಂ.ಕುಮಾರ್ ಹಾಗೂ ಮಾಜಿ ನಗರ ಸಭೆ ಅಧ್ಯಕ್ಷ ಶಿವಪ್ರಕಾಶ್ ಎಸ್. ಕೆ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ತ್ರಿಜನ್ಯ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಸ್ ರಮೇಶ್, ಸಂಸ್ಕೃತಿ ಲಯನ್ಸ್ ಮದ್ದೂರು ಅಧ್ಯಕ್ಷ ಡಿಕೆ ಪ್ರಭಾಕರ್, ಮಾಂಡವ್ಯ ನಗರ ಲಯನ್ಸ್ ಅಧ್ಯಕ್ಷ ಜಗದೀಶ್, ಜನಪರ ಲಯನ್ಸ್ ಅಧ್ಯಕ್ಷೆ ರತ್ನಮ್ಮ ವೈಹೆಚ್, ಸಮೃದ್ಧಿ ಲಯನ್ಸ್ ಅಧ್ಯಕ್ಷ ನೀನಾ ಪಾಟೇಲ್, ಸನ್ಮತಿ ಲಯನ್ಸ್ ಅಧ್ಯಕ್ಷೆ ಸುಜಾತ, ಮಂಡ್ಯ ಸಿಟಿ ಲಯನ್ಸ್ ಅಧ್ಯಕ್ಷ ಎಂಕೆ ಪ್ರಶಾಂತ್, ಹಲಗೂರು ಲಯನ್ಸ್ ಅಧ್ಯಕ್ಷ ಡಾ. ನಾಗೇಶ್, ಮಧುರ ಲಯನ್ಸ್ ಅಧ್ಯಕ್ಷ ಜಿಎನ್ ಕೆಂಪರಾಜು, ಮಂಡ್ಯ ಬೆಳಕು ಲಯನ್ಸ್ ಅಧ್ಯಕ್ಷ ಶ್ರೀಕಾಂತ್, ಮೈಸೂರು ಕಾಮಧೇನು ಅಧ್ಯಕ್ಷ ಆಕಾಶ್ ಭೈರಿ ಹಾಗೂ ಮೈಸೂರು ಸಿಟಿ ಲಯನ್ಸ್ ಅಧ್ಯಕ್ಷೆ ಶೋಭ ಬಾಲು ಸಿರಿಬಾಲು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿಭಾಂಜಲಿ ಡೇವಿಡ್ ಮತ್ತು ತಂಡದಿಂದ 'ಸಂಗೀತ ಸಂಜೆ' ಕಾರ್ಯಕ್ರಮ ನಡೆಯಲಿದೆ. ಭರತನಾಟ್ಯ, ವೀರಗಾಸೆ, ಪೂಜಾ ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಮನರಂಜಿಸಲಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ