ಉಜಿರೆ: ಪ್ರತಿಯೊಬ್ಬರೂ ಆರ್ಥಿಕ ಚಟುವಟಕೆಗಳಲ್ಲಿ ತೊಡಗಿ ಉದ್ಯೋಗ ಸೃಷ್ಟಿಯಾಗುವಂತೆ ಮಾಡಬೇಕು. ಪ್ರತಿಯೊಬ್ಬರೂ ಉತ್ಪಾದಕರಾಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ್ ಶಾಲಿಯಾನ್ ಅಭಿಪ್ರಾಯಪಟ್ಟರು.
ನವೆಂಬರ್ 23ರಂದು ಉಜಿರೆಯ ಶ್ರೀ.ಧ.ಮ.ಕಾಲೇಜಿನಲ್ಲಿ ನಡೆದ ಅರ್ಥಶಾಸ್ತ್ರ ವಿಭಾಗದ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಪಾನ್, ದ.ಕೊರಿಯಾ ದೇಶಗಳು ನಮಗೆ ಮಾದರಿಯಾಗಿದೆ. ಕೇವಲ ವೈಯಕ್ತಿಕ ವಿಷಯಗಳಿಗೆ ಮಾತ್ರ ದುಡಿಯದೆ ನಮ್ಮ ಉದ್ಯೋಗ, ದೇಶದ ಆರ್ಥಿಕತೆಗೆ ಕೊಡುಗೆಯಂತಾಗಬೇಕು ಎಂದು ಕರೆ ನೀಡಿದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಡಾ.ಎ.ಜೆ.ಜಯಕುಮರ್ ಶೆಟ್ಟಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅತಿಥಿಗಳು ವಿದ್ಯಾರ್ಥಿಗಳು ತಯಾರಿಸಿದ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿದರು. ಕಾರ‍್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ