ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನೆ

Upayuktha
0

ಮೂಡುಬಿದಿರೆ: ಪುಸ್ತಕವನ್ನು ಸ್ನೇಹಿತರಾಗಿ ಯಾರು ನೋಡುತ್ತಾರೋ, ಅವರು ಯಾವತ್ತೂ ಕೂಡ ಬದುಕಿಗೆ ಬೆನ್ನು ಹಾಕಲ್ಲ ಎಂದು ಲೇಖಕಿ, ಪ್ರಾಧ್ಯಾಪಕಿ ಹಾಗೂ ಭಂಡಾರ್‌ಕರ್ಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ ರೇಖಾ ವಿ ಬನ್ನಾಡಿ ನುಡಿದರು.


ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ 2021-22 ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯದ ಓದು ಪ್ರಶ್ನಿಸುವ ಗುಣವನ್ನು ನೀಡುತ್ತದೆ. ಎಷ್ಟು ಅಪ್ರಿಯವಾದರೂ ಸತ್ಯವನ್ನು ಹೇಳುವ ತಾಕತ್ತನ್ನು ನೀಡುತ್ತದೆ. ಆತ್ಮವಿಶ್ವಾಸದ ಜತೆಗೆ ಜಗತ್ತನ್ನು ಪ್ರೀತಿಸುವ, ಸಹಬಾಳ್ವೆಯನ್ನು ಆಶಿಸುವ ಹಾಗೂ ಜೀವನ ಪ್ರೀತಿಯನ್ನು ಕರಗತಗೊಳಿಸುವ ಶಕ್ತಿಯನ್ನು ನೀಡುತ್ತದೆ. ಒಳ್ಳೆಯ ಓದುಗನಿಗೆ ಒಂಟಿತನ ಎಂದೂ ಕಾಡಲ್ಲ ಎಂದರು.


ಭಾಷೆ ಎನ್ನುವುದು ಅಂತರಂಗದ ಹಣತೆಯ ಹಾಗೆ. ದುರಾದೃಷ್ಟವಶಾತ್ ಇಂದು ಹಿರಿಯರಿಂದ ಹಿಡಿದು ಕಿರಿಯರವೆರೆಗೆ ಭಾಷೆ ಸಾಹಿತ್ಯಗಳು ಅನುಉತ್ಪಾದಕ ಎಂಬ ಭಾವನೆ ಮೂಡುತ್ತಿರುವುದು ಖೇದಕರ. ಮನುಷ್ಯ ಸಮತೋಲನವನ್ನು ಕಾಪಾಡಿಕೊಳ್ಳುವುದು ಬುದ್ದಿ ಮತ್ತು ಭಾವವನ್ನು ಸರಿಯಾಗಿ ಉಪಯೋಗಿಸಿಕೊಂಡಾಗ ಮಾತ್ರ. ಯುವಜನತೆ ಈ ಸಮಾಜದ ಮೌಲ್ಯಗಳನ್ನು ಸಾಕಾರಗೊಳಿಸಲು ಸದಾ ಶ್ರಮಿಸಬೇಕು ಎಂದರು.  


ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಡಿದ ಕಾಲೇಜಿನ ಪ್ರಾಚಾರ್ಯ ಪ್ರೋ ಸದಾಕತ್, ವಿಜ್ಞಾನದ ಬೆಳವಣಿಗೆಯ ಜತೆಯಲ್ಲಿ ಸಾಹಿತ್ಯದ ಬೆಳವಣಿಗೆಯ ಪ್ರಕ್ರಿಯೆಯು ನಡೆಯುತ್ತಿರಬೇಕು. ಮನುಷ್ಯ ಮಾನವೀಯತೆಯನ್ನು ಸದಾ ತನ್ನ ಪರಮ ಧರ್ಮವೆಂದು ಭಾವಿಸಿ ಬದುಕಬೇಕು ಎಂದರು.  


ಸಾಹಿತ್ಯ ಸಂಘದ ಸಂಯೋಜಕಿ ಸುಧಾರಾಣಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಕನ್ನಡ ಉಪನ್ಯಾಸಕಿ ಆಶಾ ಇ ಕಾರ‍್ಯಕ್ರಮ ನಿರೂಪಿಸಿ, ಉಪನ್ಯಾಸಕ ಧರ್ಮೆಂದ್ರ ಕುದ್ರೋಳಿ ಅತಿಥಿಗಳನ್ನು ಸ್ವಾಗತಿಸಿ, ಉಪನ್ಯಾಸಕಿ ಅಮೃತ ವಂದಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top