ಮಂಗಳೂರು: ಅರೆಹೊಳೆ ಪ್ರತಿಷ್ಠಾನ ಮತ್ತು ನಂದಗೋಕುಲ ಕಲಾವಿದರು ವತಿಯಿಂದ ನಾಳೆ 27-11-2021 ಸಂಜೆ ಘಂಟೆ 6.30ಕ್ಕೆ ಪದವಿನಂಗಡಿಯ ಬೆನಕ ಸಭಾಗೃಹದಲ್ಲಿ ಶ್ವೇತಾ ಅರೆಹೊಳೆ ಅಭಿನಯಿಸುವ ಏಕವ್ಯಕ್ತಿ ನಾಟಕ- 'ಗೆಲ್ಲಿಸಬೇಕು ಅವಳ' ಪ್ರಥಮ ಪ್ರದರ್ಶನವಿದೆ.
ನಾಟಕದ ಕಥೆ- ಸುಧಾ ಆಡುಕಳ ಅವರದ್ದು. ರಂಗವಿನ್ಯಾಸ, ನಿರ್ದೇಶನ- ರೋಹಿತ್ ಎಸ್ ಬೈಕಾಡಿ ಅವರದ್ದು. ಬೆಳಕು- ರಾಜು ಮಣಿಪಾಲ.
ಲಯನ್ಸ್ ಮತ್ತು ಲಿಯೋಕ್ಲಬ್, ಕದ್ರಿ ಹಿಲ್ಸ್; ಅಸ್ತಿತ್ವ(ರಿ), ಗುಜ್ರಿ ಗ್ಯಾಲರಿ ಸಹಯೋಗದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅರೆಹೊಳೆ ಪ್ರತಿಷ್ಠಾನದ ಸದಾಶಿವರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ. ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ರಾಮ ಮುಗ್ರೋಡಿ ಮತ್ತು ತಾರಾನಾಥ ಶೆಟ್ಟಿ ಬೋಳಾರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ