ಸಿದ್ಧಾಪುರ: ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುವ ಗೋಫಲಟ್ರಸ್ಟ್, ಕಾಮದುಘ ಟ್ರಸ್ಟ್, ಸಂಶೋಧನಾ ಖಂಡ ಇದರ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದ ಬಾನ್ಕುಳಿಯ ಗೋಸ್ವರ್ಗದಲ್ಲಿ ಅ. 31 ರವಿವಾರದಂದು 'ಗೋಪಾಲಕರ ತರಬೇತಿ- ಗೋಚಿಕಿತ್ಸೆ' ಕಾರ್ಯಕ್ರಮವು ಸಂಪನ್ನವಾಯಿತು.
ಗುರುವಂದನೆ, ಗೋವಂದನೆ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್ ಎಸ್ ಹೆಗಡೆ ಇವರು ಅಧ್ಯಕ್ಷತೆ ವಹಿಸಿದ್ದರು.
ಗೋಚಿಕಿತ್ಸೆಯಲ್ಲಿ ಆಯುರ್ವೇದ ಮತ್ತು ಹೋಮಿಯೋ ಜೌಷದಿಗಳ ಪ್ರಾಧಾನ್ಯತೆ, ರೋಗ ರುಜಿನಗಳ ಬಗ್ಗೆ ಪರಿಹಾರ ಕ್ರಮ ಈ ಬಗ್ಗೆ ತರಬೇತಿಯನ್ನು ಮಂಗಳೂರಿನ ಪಶುವೈದ್ಯರಾದ ಡಾ. ಮನೋಹರ ಉಪಾಧ್ಯಾಯ ಇವರು ನಡೆಸಿಕೊಟ್ಟರು.
ತರಬೇತಿಯಲ್ಲಿ ಭಾಗವಹಿಸಿದ ಗೋಪಾಲಕರಿಗೆ ನೇರ ಪ್ರಾತ್ಯಕ್ಷಿಕೆ, ಹಾಗೂ ತರಗತಿಯ ಮೂಲಕ ಗೋಚಿಕಿತ್ಸಾ ವಿಧಾನ, ಗೋಪಾಲನೆಯ ನಿರ್ವಹಣೆ ಮೊದಲಾದ ವಿಷಯ ಮನದಟ್ಟಾಯಿತು. ಭಾಗವಹಿಸಿದ ಎಲ್ಲ ಗೋಶಾಲೆಗಳಿಗೆ, ಗೋಚಿಕಿತ್ಸೆಯಲ್ಲಿ ಪ್ರಧಾನವಾಗಿ ಉಪಯೋಗಿಸುವ ಹೋಮಿಯೋಪತಿ ಔಷಧಿಗಳ ಕಿಟ್ ಹಾಗೂ ದೇಶೀ ಗೋವುಗಳ ನಿರ್ವಹಣಾ ಕೈಪಿಡಿಯನ್ನು ಉಚಿತವಾಗಿ ನೀಡಲಾಯಿತು.
ಸಂಶೋಧನ ಖಂಡದ ಜಯಪ್ರಕಾಶ ಲಾಡ, ಮಹಾಮಂಡಲ ಕಾರ್ಯದರ್ಶಿ ನಾಗರಾಜ ಪಿದಮಲೆ, ಶ್ರೀ ರಾಮಚಂದ್ರಾಪುರ ಮಠದ ಗೋಶಾಲೆಗಳ ಪದಾಧಿಕಾಗಳು, ಗೋಪಾಲಕರು ಉಪಸ್ಥಿತರಿದ್ದರು.
ಕಾಮದುಘ ಅಧ್ಯಕ್ಷ ಡಾ ವೈವಿ ಕೃಷ್ಣ ಮೂರ್ತಿ ಸ್ವಾಗತಿಸಿ ಗೋಫಲ ಟ್ರಸ್ಟ್ ನ ಸಂಯೋಜಕಿ ಉಷಾ ಭಟ್ ಯಾಜಿ ವಂದಿಸಿದರು. ಬಾಲಸುಬ್ರಹ್ಮಣ್ಯ ಭಟ್ ಇವರು ಕಾರ್ಯಕ್ರಮ ಸಂಯೋಜನೆ ಮಾಡಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ವಂದೇಗೋಮಾತರಮ್
ReplyDelete