ಸಂವಿಧಾನದಲ್ಲಿರುವ ನಿಯಮ, ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರಬೇಕು: ಟಿ.ಎನ್.ಸಿ ಲಕ್ಷ್ಮಿನರಸಿಂಹನ್

Upayuktha
0

ಪುತ್ತೂರು ನ.26: ನವೆಂಬರ್ 26ನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ. ದೇಶವನ್ನು ಅರಾಜಕತೆಯಿಂದ ರಕ್ಷಿಸಲು ಸಂವಿಧಾನದ ಅಗತ್ಯತೆ ಎಲ್ಲಾ ದೇಶಗಳಿಗಿದೆ. ಅತಿ ಹೆಚ್ಚು ಜನಸಂಖ್ಯೆ ಇರುವಂತಹ ದೇಶಗಳಲ್ಲಿ ನಿಯಮಗಳಿಲ್ಲದೆ ಆಡಳಿತ ನಡೆಸಲು ಸಾಧ್ಯವಿಲ್ಲ. ಸಂವಿಧಾನ ಜನರಿಗಾಗಿ ನಿರ್ಮಾಣವಾದದ್ದು ಹೊರತು ಸರಕಾರದ ಉಪಯೋಗಕ್ಕಲ್ಲ. ಸಂವಿಧಾನದಲ್ಲಿರುವ ನಿಯಮಗಳು ಹಾಗೂ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರಬೇಕು ಎಂದು ಬಿ.ಇ.ಎಲ್.ನ ವಿಶ್ರಾಂತ ಹಿರಿಯ ಉಪಪ್ರಧಾನ ವ್ಯವಸ್ಥಾಪಕ ಹಾಗೂ ಕರ್ನಾಟಕ ಬಾರ್ ಕೌನ್ಸಿಲ್‌ನ ನ್ಯಾಯವಾದಿ ಟಿ. ಎನ್. ಸಿ ಲಕ್ಷ್ಮಿನರಸಿಂಹನ್ ಹೇಳಿದರು.


ಇಲ್ಲಿನ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಐಕ್ಯೂಎಸಿ ಘಟಕ, ರೆಡ್‌ಕ್ರಾಸ್, ರೇಂಜರ್ಸ್ & ರೋವರ್ಸ್ ಹಾಗೂ ಎನ್‌ಸಿಸಿ, ಎನ್.ಎಸ್.ಎಸ್, ಮಹಿಳಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ 'ಸಂವಿಧಾನ ದಿನಾಚರಣೆ' ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶುಕ್ರವಾರ ಅವರು ಮಾತನಾಡಿದರು.


ಸರಕಾರವನ್ನು ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನ ಸಾಮನ್ಯ ಜನರಿಗೆ ನೀಡಿದೆ. ಮತದಾನ ಪ್ರಜೆಗಳ ಅತಿದೊಡ್ಡ ಶಸ್ತ್ರವಾಗಿದೆ. ಸರಕಾರದಿಂದ ಅನ್ಯಾಯವಾದಲ್ಲಿ ನೇರವಾಗಿ ಸುಪ್ರೀಂ ಕೋರ್ಟ್ ಗೆ ದೂರು ನೀಡುವ ಹಕ್ಕನ್ನು ಜನರಿಗೆ ನೀಡಿದೆ ಎಂದು ನುಡಿದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹಿಳಾ ದಕ್ಷ ಸಮಾಜದ ಸಮಿತಿಯ ಸದಸ್ಯೆ ಲಲಿತಾ ಮಾತನಾಡಿ, ಬಿಕ್ಷಾಟನೆಗೆ ನಿರ್ಬಂಧವಿದ್ದರೂ ಕೂಡ ಇಂದು ಮಕ್ಕಳನ್ನು ಇಂತಹ ಚಟುವಟಿಕೆಗಳಲ್ಲಿ ಬಳಸಲಾಗುತ್ತಿದೆ. ಅಷ್ಟೆ ಅಲ್ಲದೆ ಕೊಲೆ, ಕಳ್ಳತನದಂತಹ ಕೆಲಸಗಳಿಗೂ ಮಕ್ಕಳನ್ನು ತೊಡಗಿಸಿಕೊಳ್ಳಾಗುತ್ತಿದೆ. ಈ ಘಟನೆಗಳಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಮಕ್ಕಳು ಬಿಕ್ಷಾಟನೆಯಲ್ಲಿ ಅಥವಾ ಯಾವುದೇ ಸಮಸ್ಯೆಯಲ್ಲಿರುವುದು ಕಂಡು ಬಂದರೆ ಅದನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ದೂರು ನೀಡಬೇಕು. ಮಕ್ಕಳ ಹಕ್ಕಿನ ಜೊತೆಗೆ ಬದುಕುವ ಹಕ್ಕಿನ ಬಗ್ಗೆಯೂ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ಮಾಹಿತಿ ನೀಡಬೇಕು ಎಂದರು.  


ಈ ಸಂದರ್ಭ ವಿವೇಕಾನಂದ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಶೇಖರ್ ಅಯ್ಯರ್, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ವಿಷ್ಣುಕುಮಾರ್, ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನ್ನಪೂರ್ಣ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಜ್ಯೋತಿ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top