ಮಂಗಳೂರು: ಇಂದು ಸಂಸ್ಕಾರಗಳೇ ಅಳಿದು ಹೋಗುವ ಕಾಲಕ್ಕೆ ನಮ್ಮ ಪೀಳಿಗೆಯ ವಾರೀಸುದಾರರದ ನಾವೇ ಕಲಿಸಬೇಕಾದ, ಅವರಿಗೆ ತಲುಪಿಸಬೇಕಾದ ಹೊಣೆ ಹೊಂದಿದ್ದೇವೆ. ಮನಸ್ಸಿನ ವಿಚಾರಧಾರೆಗಳನ್ನು ಮಕ್ಕಳ ತಲೆಯಲ್ಲಿ ತುಂಬಿಸುವ ಬದಲು ಹಿಂದೂ ಧಾರ್ಮಿಕ ವಿಚಾರಗಳಾದ ಭಜನೆ, ಸಂಕೀರ್ತನೆ ನಮ್ಮ ಸಂಸ್ಕೃತಿಯ ವಿಚಾರಗಳನ್ನು ಅರುಹುವ ಕಾರ್ಯವನ್ನು ಮಾಡೋಣ ತುಳು ಸಾಹಿತ್ಯ ಅಕಾಡೆಮಿ ಮತ್ತು ಸಂಸ್ಕಾರ ಭಾರತಿ ಮಂಗಳೂರು ಸಂಸ್ಥೆಗಳು ಈ ಭಜನಾ ಏಕಹಾವನ್ನು ನಡೆಸಿ ಜನ ಜಾಗ್ರತಿಯನ್ನು ಉಂಟು ಮಾಡಿವೆ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ತುಳುಭವನದಲ್ಲಿ ಇತ್ತೀಚೆಗೆ ನಡೆದ ತುಡರ್ ಪರ್ಬೊಗು ಭಜನೆದೈಸಿರೋ ಎಂಬ ಭಜನಾ ಏಕಾಹ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನವಿತ್ತರು.
ವಿಶೇಷವಾಗಿ ನಮ್ಮ ಧರ್ಮದ ಮಾತಾ ಭಗಿನಿಯರು ಹೆಚ್ಚು ಹೆಚ್ಚು ಇಂತಹ ವಿಚಾರಗಳನ್ನು ಅರಿತುಕೊಂಡು ಮುಂದಿನ ಪೀಳಿಗೆಗೆ ತಿಳಿಸಿದರೆ ದುರ್ಗಣಗಳು ಪಾಪಕೃತ್ಯಗಳು ಅವರಿಂದ ದೂರವಾಗಿ ಸಮಾಜ ಒಪ್ಪುವ ಕಾರ್ಯಮಾಡುವ ಸಮಾಜದ ಆಧಾರ ಸ್ಥoಭಗಳಾಗುತ್ತಾರೆ ಎಂದು ಅವರು ತಿಳಿಸಿದರು.
ಭಜನೆದೈಸಿರೋ ಕಾರ್ಯಕ್ರಮದಲ್ಲಿ ಒಂದಷ್ಟು ಪರಿಣಾಮ ಉಂಟು ಮಾಡುತ್ತಾ ಮನೆ ಮನಗಳ ಕದ ತೆರೆವ ಕಾರ್ಯಕ್ಕೆ ಚಾಲನೆ ನೀಡಿದೆ. ಭಗವಂತನ ಅನುಗ್ರಹಕ್ಕೆ ಪಾತ್ರವಾಗಿದೆ ಎಂದು ಹೇಳಿದರು.
ದಕ್ಷಿಣ ಪ್ರಾಂತ ಸಂಘ ಚಾಲಕರಾದ ಡಾ. ಸಿ. ವಾಮನ ಶೆಣೈಯವರು ಮಾತನಾಡುತ್ತ ಈ ಭಾಗದಲ್ಲಿ ಹೃದಯ ಹೃದಯಗಳನ್ನು ಬೆಸೆಯುವ ಭಾಷೆಯಾಗಿ ತುಳುವಿದೆ. ಅದೂ ವಿಶೇಷವಾಗಿ ತುಳುವಿನಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಅತ್ಯಂತ ಸುತ್ಯರ್ಹ ಕಾರ್ಯ ಎಂದು ಮುಖ್ಯ ಅತಿಥಿಯಾಗಿ ಹೇಳಿದರು.
ತುಳುಭವನದ ನವ ನಿರ್ಮಾಣ ಕಾರ್ಯ ತುಳುವಿನಲ್ಲಿ ಶಿಕ್ಷಣ ಇದೆಲ್ಲದರ ಬಗ್ಗೆ ತುಳು ಅಕಾಡೆಮಿ ಪ್ರಭಾವಶಾಲಿಯಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ. ಇದು ಇನ್ನು ಮುಂದುವರಿಯಲು ಸಮಸ್ತ ತುಳುವರ ಸಹಕಾರ ಬೇಕು. ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಕಾರ್ಯ ತುರ್ತಾಗಿ ಆಗಲಿ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತುಳುವ ಬೊಳ್ಳಿ ದಯಾನಂದ ಕತ್ತಲ್ಸಾರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಶ್ರೀಮತಿ ಸುಲೋಚನಾ ಭಟ್ ಮುಖ್ಯ ಅತಿಥಿಯಾಗಿದ್ದರು. ಸಿ ಎ ಶಾಂತರಾಮರು ನವಂಬರ್ 28 ರಂದು "ಭಗತ್ ಸಿಂಹ" ಯಕ್ಷಗಾನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಚಂದ್ರಶೇಖರ ಶೆಟ್ಟಿ, ಧನ ಪಾಲ್ ಶೆಟ್ಟಿಗಾರ್ ನಾಗರಾಜ್ ಶೆಟ್ಟಿ, ಗಣೇಶ್ ಕುಮಾರ್, ರಘುವೀರ್ ಗಟ್ಟಿ, ಕಿರಣ್ ಕುಮಾರ್, ಮುಖ್ಯ ಅತಿಥಿಗಳಾಗಿದ್ದರು.
ಸಂಸ್ಕಾರ ಭಾರತಿ ಇದರ ಅಧ್ಯಕ್ಷ ಪುರುಷೋತ್ತಮ್ ಭಂಡಾರಿ ಸ್ವಾಗತಿಸಿದರು. ಶ್ರೀಮತಿ ಶ್ರೀಲತಾ ನಾಗರಾಜ್ ಧ್ಯೆಯ ಗೀತೆ ಹಾಡಿದರು. ಪ್ರವೀಣ್ ಕುಂಪಲ ಕಾರ್ಯಕ್ರಮ ನಿರೂಪಣೆ ಮಾಡಿದರು. ಯಕ್ಷ ಭಜನೆಯ ಮುಖ್ಯಸ್ಥ ವರ್ಕಾಡಿ ರವಿ ಅಲೆವೂರಾಯ, ಭಜನಾ ತಂಡ ಶ್ರೀ ರಕ್ತೇಶ್ವರಿ ನಾಗಬ್ರಹ್ಮ ಭಜನಾ ಮಂಡಳಿ ಪೆರ್ಲಗುರಿ ಇವರನ್ನು ವಜ್ರದೇಹಿ ಶ್ರೀ ಗಳು ಅಭಿನಂದಿಸಿ ಗೌರವಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ