ಅಂಬಿಕಾದಲ್ಲಿ ಭಗವದ್ಗೀತಾ ಪಠಣ

Upayuktha
0

 


ಪುತ್ತೂರು: ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಪ್ರತಿದಿನ ಪಠಿಸಲು ಸಮಯದ ಅಭಾವ ಇರುವುದು ಸತ್ಯ. ಶಿಷ್ಯನೊಬ್ಬ ರಮಣ ಮಹರ್ಷಿಗಳ ಜೊತೆ ಈ ವಿಚಾರವಾಗಿ ಕೇಳಿದಾಗ ನಲ್ವತ್ತೆರಡು ಶ್ಲೋಕಗಳಲ್ಲಿ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಏಳುನೂರು ಶ್ಲೋಕಗಳ ಸಾರ ಅಡಗಿರುವುದು. ಆದುದರಿಂದ ಪ್ರತಿನಿತ್ಯ ದೇವರನ್ನು ನೆನೆಯುತ್ತಾ ನಲ್ವತ್ತೆರಡು ಶ್ಲೋಕಗಳನ್ನು ಓದಲು ಸಮಯ ಖಂಡಿತಾ ಎಲ್ಲರಿಗೂ ಲಭ್ಯವಾಗುವುದು ಕಷ್ಟಕರವಲ್ಲ ಎಂದು ಖ್ಯಾತ ವಾಗ್ಮಿ, ಚಿಂತಕ ಶ್ರೀಕೃಷ್ಣ ಉಪಾಧ್ಯಾಯರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಬಗ್ಗೆ ಆಸಕ್ತಿ ಹುಟ್ಟಿಸಿದರು.


ಸ್ಪಷ್ಟ ಉಚ್ಛಾರದೊಂದಿಗೆ ಪಠಣ ಕ್ರಮ, ನೈತಿಕ ವಿಚಾರಗಳ ಬಗ್ಗೆ, ಮಾನವನು ಕ್ರಮಬದ್ಧ ಜೀವನದಿಂದ ಬದುಕಿದಾಗ ಬದುಕಿಗೊಂದು ಅರ್ಥ ಬರುವುದೆಂಬುದನ್ನು ಶ್ರೀಕೃಷ್ಣ ಉಪಾಧ್ಯಾಯರು ಮನಮುಟ್ಟುವಂತೆ ಮನದಟ್ಟು ಮಾಡಿದರು.


ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಹಿಂದಿ ಉಪನ್ಯಾಸಕಿ ಪುಷ್ಪಲತಾ ವಂದಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ್ ಸಹಕರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top