ಸಂವಿಧಾನದ ಬಗ್ಗೆ ಅರಿವು ಅಗತ್ಯ: ಡಾ. ಪಿ ಅನಂತಕೃಷ್ಣ

Upayuktha
0

 


ಮಂಗಳೂರು: ದಿನಾಂಕ 18-11-2021 ನೇ ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ ಮೇರಿಹಿಲ್, ಮಂಗಳೂರು ಇಲ್ಲಿ ಸಂವಿಧಾನ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಸಂಪನ್ಮೂಲ ವ್ಯಕ್ತಿಗಳಾದ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಪಿ ಅನಂತಕೃಷ್ಣ ಭಟ್ ಇವರು ದೀಪ ಬೆಳಗಿಸಿ ಮಾತನಾಡಿದರು.  


ಸಂವಿಧಾನ ಎನ್ನುವುದು ನಿಂತ ನೀರಿನಂತಲ್ಲ ಅದು ಹರಿಯುತ್ತಿರುವ ನೀರಿನಂತೆ. ಭಾರತದ ಸಂವಿಧಾನವು 9 ಡಿಸೆಂಬರ್ 1947 ರಿಂದ 1949 ರ ಮಧ್ಯಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, 26 ಜನವರಿ 1950 ರಂದು ಜಾರಿಗೆ ಬಂದಿತು. ಇದನ್ನು ಭಾರತದಲ್ಲಿ ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.


ಇದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂಬ ಸರಕಾರದ ಮೂರು ಅಂಗಗಳನ್ನು ಒಳಗೊಂಡಿದೆ. 300 ಮಂದಿ ಸದಸ್ಯರು ಒಟ್ಟು ಸೇರಿ ಸಂವಿಧಾನದ ನಿಯಮಗಳನ್ನು ರಚಿಸಿರುತ್ತಾರೆ. ಇದು ಒಟ್ಟು 395 ವಿಧಿಗಳನ್ನು, 8 ಅನುಸೂಚಿಗಳನ್ನು ಹಾಗೂ 22 ಭಾಗಗಳನ್ನು ಒಳಗೊಂಡಿದೆ. ನವೆಂಬರ್ 26 ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನ. 1949 ರ ನವೆಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು.


ಹೀಗಾಗಿ ಈ ದಿನವನ್ನು ದೇಶಾದ್ಯಂತ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. ಸಂವಿಧಾನದಲ್ಲಿ ಭಾರತದ ಯಾವುದೇ ಒಂದು ರಾಜ್ಯವು ವಿಭಜನೆಯಾಗುವ ನಿಯಮವು ಸಂವಿಧಾನದಲ್ಲಿ ಇರುವುದಿಲ್ಲ ಎಂದು ತಿಳಿಸಿದರು ಹಾಗೂ ಮೂಲಭೂತ ಹಕ್ಕುಗಳ ಬಗ್ಗೆ ವಿವರಿಸಿದರು. 


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಪ ಸಮಾದೇಷ್ಟರಾದ ಶ್ರೀ ರಮೇಶ್ ಇವರು ಧನ್ಯವಾದ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್ ಶೇರ ಹಾಗೂ ಒಟ್ಟು 50 ಮಂದಿ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top