ನಿಟ್ಟೆ: ಬಿಎಸಿಎ ಮತ್ತು ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿಯು ನಿಟ್ಟೆ ಸಮೂಹ ವಿದ್ಯಾಸ೦ಸ್ಥೆಯ ಸಹಯೋಗದೊ೦ದಿಗೆ ನಿಟ್ಟೆಯ ಬಿ.ಸಿ ಆಳ್ವಾ ಕ್ರೀಡಾಂಗಣದಲ್ಲಿ ನಿಟ್ಟೆ 50+ ವೆಟರನ್ಸ್ ಟ್ರೋಫಿ ಹಬ್ಬವನ್ನು ಹಮ್ಮಿಕೊಂಡಿದೆ.
ನವೆಂಬರ್ 19, 20 ಮತ್ತು 21 ರಂದು ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿರುವ ಬಿಸಿ ಆಳ್ವಾ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ಬಿಎಸಿಎ-ಕೆಆರ್‌ಎಸ್ ಇಲೆವೆನ್ ಹಾಗೂ ರಾಯಲ್ ಇಂಡಿಯನ್ಸ್ ತಂಡಗಳು ಮೂರು ದಿನಗಳ ಕಾಲ ಹೋರಾಟ ನಡೆಸಲಿವೆ. ಪುಣೆ, ಕೋಲ್ಕೊತಾ ಮತ್ತು ಚೆನ್ನೈ ಮೂಲದ ಆಟಗಾರರು ಪ್ರವಾಸಿ ತಂಡದಲ್ಲಿರುತ್ತಾರೆ.
ಕ್ರಿಕೆಟ್ ಅಭಿವೃದ್ಧಿಯ ಜತೆಯಲ್ಲಿ ದೈಹಿಕ ಕ್ಷಮತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಟೂರ್ನಿಯ ಉದ್ದೇಶವಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ನಾಯಕರಾದ ವಿಜಯ್ ಆಳ್ವಾ ಹಾಗೂ ಉದಯ ಕಟಪಾಡಿ ಅವರು ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಸಹಯೋಗದೊ೦ದಿಗೆ ಈ ಟೂರ್ನಿಯನ್ನು ಆಯೋಜಿಸಿದ್ದಾರೆ. ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ ಹೆಗ್ಡೆ ನ.19 ರಂದು 10:30 ಕ್ಕೆ ಉದ್ಘಾಟಿಸಲಿರುವರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವರಾದ ಯೋಗೇಶ್ ಹೆಗ್ಡೆ, ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರ೦ಜನ್ ಚಿಪ್ಳೂಣ್ಕರ್, ಉಡುಪಿ ಎಮೆಚೂರ್ ಅಥ್ಲೆಟಿಕ್ ಎಸೋಸಿಯೇಶನ್ ನ ಅಧ್ಯಕ್ಷ ಅಶೋಕ್ ಅಡ್ಯ೦ತಾಯ, ಉಡುಪಿ ಜಿಲ್ಲಾ ಕ್ರಿಕೆಟ್ ಎಸೋಸಿಯೇಶನ್ ಅಧ್ಯಕ್ಷ ಡಾ. ಕೃಷನ ಪ್ರಸಾದ್, ಕೆ.ಎಸ್.ಸಿ.ಎ ಮಾಜಿ ಸಂಚಾಲಕ ಮನೋಹರ್ ಅಮಿನ್ ಕಾರ್ಯಕ್ರಮದ ಗೌರವ ಅಥಿತಿಯಾಗಿ ಭಾಗವಹಿಸಲಿರುವರು.
90ರ ದಶಕದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದ ಪ್ರಮುಖ ಆಟಗಾರರು ಮೂರು ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರಾದ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ (ಬಿಎಸಿಎ) ಹಾಗೂ ಕಟಪಾಡಿ ರಮಾನಂದ ಶಾಂತಿ (ಕೆಆರ್‌ಎಸ್) ಕ್ರಿಕೆಟ್ ಅಕಾಡೆಮಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ