"ಇನ್ನು ಆಗಾಗ ಮಾಡುತ್ತಿರುತ್ತೇವೆ"
"ನಾವು ಆಗ ಪುಣಚದಲ್ಲಿದ್ದೆವು. ನಾನು ಚಿಕ್ಕವನಿದ್ದಾಗ ಎಷ್ಟೋ ಬಾರಿ ಶಾಲೆಯ ಬುತ್ತಿಯಲ್ಲಿ ಬಾಳೆಕಾಯಿ ಶಾವಿಗೆ
ಕೊಂಡುಹೋದರೆ ಅದು ಮಧ್ಯಾಹ್ನದೂಟ. ನಮ್ಮ ಮನೆಯಲ್ಲಿ ಆಗಾಗ ಬೆಳಗ್ಗಿನ ಉಪಾಹಾರಕ್ಕೆ, ಒಮ್ಮೊಮ್ಮೆ ರಾತ್ರಿಯ ಆಹಾರವಾಗಿಯೂ ಮಾಡುವುದಿತ್ತು."
"ಇದೇ ಶಾವಿಗೆಯನ್ನು ಒಣಗಿಸಿಟ್ಟು ಎಣ್ಣೆಯಲ್ಲಿ ಹುರಿದರೆ ತಿನ್ನಲು ರುಚಿಯಾಗುತ್ತಿತ್ತು. ಬೇಯಿಸಿ ಕಡೆಯುವ (ರುಬ್ಬುವ) ಕಲ್ಲಿನಲ್ಲಿ ಹಾಜಿ ಜಜ್ಜಿ ಒಗ್ಗರಣೆ ಹಾಕಿಯೂ ’ಒಗ್ಗರಣೆ ಬಾಳೆಕಾಯಿ’ಯನ್ನು ತಿಂಡಿಯಾಗಿ ತಿನ್ನುವುದಿತ್ತು."
ಈ ಮಾತು ಹೇಳುವ ಕೃಷಿಕ ಗೋಪಾಲೃಷ್ಣ ಭಟ್ಟರಿಗೀಗ 73 ವರ್ಷ ವಯಸ್ಸು. ಕಾಲು ಶತಮಾನದಿಂದ ಉಪ್ಪಿನಂಗಡಿಯ ಬಳಿ ಹಿರೇಬಂಡಾಡಿ ವಾಸಿ. ಬಾಕಾಶಾ (ಬಾಳೆಕಾಯಿ ಶಾವಿಗೆ) ಸವಿಯದೆ ಅಷ್ಟೇ ಕಾಲವೂ ಆಗಿದೆ.
ಈಚೆಗೆ ತಾವು ಸದಸ್ಯರಾಗಿರುವ ಏಟಿವಿ ವಾಟ್ಸಪ್ ಗುಂಪಿನಲ್ಲಿ ಬಂದ ಮಾಹಿತಿ ಅನುಸರಿಸಿ ಭಟ್ಟರಲ್ಲಿ ಬಾಕಾಶಾ ಪಾಕ ತಯಾರಾಯಿತು. ಸ್ವಲ್ಪ ಹೊತ್ತಿಗೆ ಅವರು ವರ್ಷ ಎಳೆಯರೂ ಆದರು! ಏಕೆಂದರೆ ಈ ಸೂಪರ್ ಬ್ರೇಕ್ ಫಾಸ್ಟನ್ನು ಮರೆತು ಅಷ್ಟೂ ಕಾಲವಾಗಿಬಿಟ್ಟಿದೆ.
"ಇನ್ನು ಮರೆಯುವುದಿಲ್ಲ. ಆಗಾಗ ಮಾಡುತ್ತೇವೆ" ಎನ್ನುತ್ತಾರೆ ಗೋಪಾಲಕೃಷ್ಣ ಬಾಯಿ ತುಂಬಾ ನಗುತ್ತಾ.
- ಗೋಪಾಲಕೃಷ್ಣ ಭಟ್, ಹಿರೇಬಂಡಾಡಿ- 78920 43083 (8- 9 pm)
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
-