|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 "ಬಾಕಾಶಾ ವಿದ್ಯೆಯನ್ನು ಊರಿಡೀ ಹಬ್ಬಿಸಬೇಕಿದೆ"

"ಬಾಕಾಶಾ ವಿದ್ಯೆಯನ್ನು ಊರಿಡೀ ಹಬ್ಬಿಸಬೇಕಿದೆ"



"ಮಾಡ್ಲಿಕ್ಕೇನೂ ತ್ರಾಸ ಇಲ್ಲ. ಬಾಳೆಕಾಯಿಯನ್ನು ಬೇಯಿಸಿದ ಬಿಸಿ ಇದ್ದಾಗಲೇ ಒತ್ತಬೇಕು. ತಣಿದರೆ ಗಟ್ಟಿಯಾಗುತ್ತೆ." ಮೊದಲ ಬಾರಿಗೆ ಬಾಕಾಶಾ (ಬಾಳೆಕಾಯಿ ಶಾವಿಗೆ) ತಯಾರಿಸಿ ಸವಿದ ಸಿದ್ದಾಪುರದ ವಿದ್ಯಾ ರಾಮನಾಥ ಹೆಗಡೆ ಹೇಳುವ ಮಾತಿದು.


ಇವರು ಮೆಟ್ಲು ಬಾಳೆ ಬಳಸಿದ್ದಾರೆ. ಎರಡಾಗಿ ಕತ್ತರಿಸಿ ಸಿಪ್ಪೆ ಸಮೇತ ಆವಿಯಲ್ಲಿ ಬೇಯಿಸುವಾಗಲೇ ಉಪ್ಪು ಹಾಕಿಕೊಂಡಿದ್ದಾರೆ. ಮನೆಯಲ್ಲಿ ಇಬ್ಬರೇ. ವಿದ್ಯಾ ಮತ್ತವರ ಪತಿ ರಾಮನಾಥ ಸುಬ್ರಾಯ ಹೆಗಡೆ (54). ಇಬ್ಬರಿಗೂ ಬಾಕಾಶಾ ತುಂಬ ಹಿಡಿಸಿದೆ.


"ಇದನ್ನು ಬೆಳಗ್ಗಿನ ಉಪಾಹಾರಕ್ಕೂ ಮಾಡಬಹುದು. ಬಿಸಿಲಲ್ಲಿ ಒಣಗಿಸಿಟ್ಟರೆ ಬೇಕಾದಾಗ ಮಾಡಲೂ ಆಗಬಹುದು. ಮಾರುಕಟ್ಟೆ ಮಾಡಲೂ ಸಾಧ್ಯವಾಗಬಹುದೇನೋ", ರಾಮನಾಥ ಬಾಕಾಶಾ ಸವಿದ ಹುಮ್ಮಸ್ಸಿನಲ್ಲಿ ತನ್ನ ಯೋಚನೆಗಳನ್ನು ವಿವರಿಸುತ್ತಾರೆ.


"ನಮ್ಮಲ್ಲಿ ದಶಕಗಳ ಹಿಂದೆ ಬಾಳೆಕಾಯಿ ಹುಡಿ ಮಾಡಿಟ್ಟುಕೊಂಡು ಅದರಿಂದ ರೊಟ್ಟಿ ಮಾಡುವುದು, ಹಿಟ್ಟು ಮಾಡಿ ಕರಿದು ಬೆಲ್ಲದ ಪಾಕದಲ್ಲಿ ಅದ್ದಿ ಸಂದ್ಯಾನೆ ಮಾಡುವುದು ಇತ್ಯಾದಿ ಇತ್ತಂತೆ. ನಮಗಂತೂ ಬಾಕಾಶಾ ಮೆಚ್ಚುಗೆಯಾಗಿ  ಈಗ ಎಲ್ಲರಿಗೂ ಹೇಳುವುದೇ ಖುಷಿ. ನಾಸಿಕದಲ್ಲಿದ್ದು ಊರಿಗೆ ಬಂದಿರುವ ಅಕ್ಕನಿಗೆ ವಿದ್ಯಾ ನಿನ್ನೆ ಫೋನ್ ಹಚ್ಚಿ ತಿಳಿಸಿದ್ದಾರೆ. ಇನ್ನು ಮುಂದೆ  ವಿಶೇಷ ಅತಿಥಿಗಳು ಬಂದರೆ ಬಾಕಾಶಾ ಮಾಡಿ ಅವರನ್ನೂ ಪ್ರೇರೇಪಿಸುತ್ತೇವೆ. ಒಟ್ಟಿನಲ್ಲಿ ಇದು ಊರಿಡೀ ಹಬ್ಬಿಸಬೇಕಾದ ವಿದ್ಯೇನೇ ಸರಿ" ರಾಮನಾಥ್ ಮಾತು ಮುಗಿಸುತ್ತಾರೆ.

ರಾಮನಾಥ್ ಸುಬ್ರಾಯ ಹೆಗಡೆ ಸಿದ್ದಾಪುರ - 94814 62087 (6 -7 pm)


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم