ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ವತಿಯಿಂದ ವಾಲ್ಮೀಕಿ ಜಯಂತಿಯ ಅಂಗವಾಗಿ ರಾಮಾಯಣದ ಮಾಯಾಮೃಗ ಪ್ರಸಂಗದ ಗಮಕ ವಾಚನ ಪ್ರವಚನದ ಮೂಲಕ ವಾಲ್ಮೀಕಿ ಸ್ಮೃತಿ ಕಾರ್ಯಕ್ರಮ ನಡೆಯಿತು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಪ್ರವಚನ ನಡೆಸಿದರು. ವಿದ್ಯಾರ್ಥಿಗಳಾದ ಭಾರವಿ. ಸಿ ಹಾಗೂ ಧರಿತ್ರಿ ಭಿಡೆ ಇವರು ವಾಚನ ಮಾಡಿದರು.