ಉಜಿರೆ: ಬೆಳ್ತಂಗಡಿಯಲ್ಲಿರುವ ಕಿರಿಯ ಸಿವಿಲ್ ನ್ಯಾಯಾಲಯವು ಧರ್ಮಸ್ಥಳ ಅಥವಾ ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಯೆ ಯಾವುದೇ ಆರೋಪ, ಸುಳ್ಳುಸುದ್ದಿ, ಅಪಪ್ರಚಾರ ಮಾಡಬಾರದೆಂದು ಶಾಶ್ವತ ಪ್ರತಿಬಂಧಕಾಜ್ಞೆಯನ್ನು ನೀಡಿ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ್ ನಾಯಕ್ ಇವರು ಬೆಳ್ತಂಗಡಿಯ ಹಿರಿಯ ನ್ಯಾಯಾಲಯದಲ್ಲಿ, ಕಿರಿಯ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಅಪೀಲು ಸಲ್ಲಿಸಿದ್ದರು.
ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿದ ಬೆಳ್ತಂಗಡಿ ಹಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ನಾಗೇಶ್ ಮೂರ್ತಿಯವರು ಅಪೀಲನ್ನು ವಜಾ ಮಾಡಿರುತ್ತಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ