||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೀವನಾನಂದ ಯೋಗ

ಜೀವನಾನಂದ ಯೋಗ


ಯೋಗಾಸನಂಗಳ ಮಾಳ್ಪೆನೆಂಬರು.....

ಜೀವ - ದೇವ ಸಂಬಂಧಂಗಳನರಿಯದೇ ಆಚರಿಪ ಆಸನಂಗಳು ಯೋಗಾಸನವೆಂತಕ್ಕು ಅಯ್ಯಾ..‌‌..

ಎಲ್ಲೆಲ್ಲೂ ಇರ್ಪ ಪರದೈವವ ತನ್ನೊಳಗೆ ಅನುಸಂಧಾನ ಮಾಡುತ ಆಸನಂಗಳ ಮಾಳ್ಪುದಾದರದೇ ಬ್ರಹ್ಮಚರ್ಯವೆಂಬಂತಾಗಿಪುದಯ್ಯಾ.....


ಅದರ ಅನುಸಂಧಾನಕೆ ಪೂರಕವಾಗಿರ್ಪ ಸ್ವಾಧ್ಯಾಯ (ವೇದಾಂತ ಚಿಂತನೆ) ಮಾಡಿದರಷ್ಟೇ

ಬ್ರಹ್ಮಚರ್ಯೆಯಲಿರಲನುಕೂಲವಯ್ಯಾ.

ಇದನರಿತು ಉಚ್ವಾಸಂಗಳಲಿ ದೈವ ಶಕ್ತಿಯ ಆವಾಹನೆಯೆಂದೇ ಭಾವಿಸುತ...

ನಿಶ್ವಾಸಂಗಳಲಿ ರಾಕ್ಷಸ ಗುಣಗಳೆಲ್ಲದರ ನಿರ್ಗಮನವಾಯಿತೆಂದೇ ಭಾವಿಸುತ...

ಆಚರಿಪ ಪ್ರತೀ ಆಸನಂಗಳ ನಿರುಮ್ಮಳ  ದೈವ ಶರಣಾಗತ ಭಾವದಿ...


ಭಗವಂತಗೆ ಮಾಳ್ಪ ನಮಸ್ಕಾರ ಭಂಗಿಗಳೇ ಎಂದಾಲೋಚಿಸುತ...

ಮಾಳ್ಪುದಾದರಷ್ಟೇ ಅದು ಯೋಗಾಸನವೆಂದಂತಕ್ಕು ಅಯ್ಯಾ...

ಇಲ್ಲದಿರೆ ಅದು ಬರೀ ವ್ಯಾಯಮವಷ್ಟೇ ಅಯ್ಯಾ...

ಕರ್ಮಕ್ಕೆ ತಕ್ಕ ಫಲವೆಂದರಿತು ನಿಜ ಯೋಗಾಸನ ಮಾಳ್ಪುದಾದರದೇ...

ಬುದ್ದಿವಂತಿಕೆಯ ಜೀವನಾನಂದ ಸವಿಯುವ ಪರಿ ಎಂದಕ್ಕು ಅಯ್ಯಾ...

-ಶ್ಯಾಮ


ದೇಹ ಕೈಲಾಸ


ಬ್ರಹ್ಮಾಂಡವು ಅನಾದಿ ಅನಂತವಯ್ಯಾ...

ಅದು ಕಾಲಾತೀತ ಹಾಗೂ ಅನಂತ ಕಾಲದವರೆಗಿರ್ಪುದಯ್ಯಾ...

ಅದರ ದೃಷ್ಟಿಯಿಂದೀ ಜೀವದ ಅಸ್ತಿತ್ವ ಯಾ ಸಾಧನೆಯಂಗಳ ನೋಡಿದರದಕೇನೇನು ಬೆಲೆ ಇಲ್ಲವಯ್ಯಾ...

ಆದರೆ ಬ್ರಹ್ಮಾಂಡದಲಿರ್ಪ ಅದೇ ಈ ಪಿಂಡಾಂಡದಲಿರ್ಪ ಚೈತನ್ಯವೇ ಅಯ್ಯಾ...

ಅದರ ದೃಷ್ಟಿಯಿಂದೀ ಜೀವವ ನೋಡಿದರೆ ಅದೇ ದೇವನಾಗಿರ್ಪ ಸದಾಶಿವನಯ್ಯಾ...


ಅದರಿಂದ ಏಕಕಾಲಕೆ ನಾವರಿಯಬೇಕಿದೆ ನಮ್ಮೆರಡೂ ಬಗೆಯ ಅಸ್ತಿತ್ವವಯ್ಯಾ...

ಅದರಿಂದ ನಮ್ಮ ಬುದ್ಧಿ ಸ್ಥಿರವಾಗಿ ಸಮತ್ವಂ ಯೋಗಮುಚ್ಚತೇ ಎಂಬಂತಾಗಿ....

ಸರ್ವರಲಿ ಸಮ ಬಾಳು ಸಮ ಪಾಲು ಎಂಬರಿವು ದೃಢವಾಗಿ...

ಸರ್ವಾತ್ಮಕ ಬುದ್ದಿ ಸ್ಥಿರವಾಗೆ ತನ್ನಂತೆ ಪರರ ಬಗೆಯುತ...

ತನ್ನ ದೇಹವನೇ ಕೈಲಾಸವಾಗಿಸಿಕೊಳುವನಯ್ಯಾ...

-ಶ್ಯಾಮ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post