|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯೋಗ ಕ್ರಿಯೆಗಳು (ದೇಹದ ಒಳಗಿನ ಅಂಗಗಳ ಶುಚಿಗೊಳಿಸುವಿಕೆ)- ಕಪಾಲಭಾತಿ ಕ್ರಿಯೆ

ಯೋಗ ಕ್ರಿಯೆಗಳು (ದೇಹದ ಒಳಗಿನ ಅಂಗಗಳ ಶುಚಿಗೊಳಿಸುವಿಕೆ)- ಕಪಾಲಭಾತಿ ಕ್ರಿಯೆ

 



ಕ್ರಿಯೆಗಳು ಎಂದರೆ ಶುದ್ಧೀಕರಣ ಮಾಡುವುದು ಯಾ ನಿರ್ಮಲಗೊಳಿಸುವುದು. ಸ್ನಾನ ಮಾಡುವುದು, ಹಲ್ಲುಜ್ಜುವುದು, ಮುಖ ತೊಳೆಯುವುದು ಇತ್ಯಾದಿಗಳೆಲ್ಲಾ ಶುದ್ಧೀಕರಣ ಕ್ರಿಯೆಗಳಾಗಿವೆ. ಆದರೆ ಯೋಗದ ಕ್ರಿಯೆಗಳೆಲ್ಲಾ ದೇಹದ ಒಳಗಿನ ಅಂಗಗಳನ್ನು ಶುಚಿಗೊಳಿಸುವುದು. ಯೋಗಿಗಳು ಉಪಯೋಗಿಸುವ ವಿಶೇಷ ತಂತ್ರಗಳಾಗಿವೆ. ಹಠಯೋಗಿಗಳು ದೇಹದಲ್ಲಿರುವ ಎಲ್ಲಾ ರೀತಿಯ ಕಲ್ಮಶಗಳನ್ನು ಹೊರ ಹಾಕಿ ಶುದ್ಧೀಕರಣ ಮಾಡಲು ಪಟ್ ಕ್ರಿಯೆಗಳನ್ನು ತಿಳಿಸಿದ್ದಾರೆ. ಇಲ್ಲಿ ಯೋಗದೊಂದಿಗೆ ಕ್ರಿಯೆಗಳನ್ನು ಮಾಡುವುದರಿಂದ ಶರೀರದ ವಿವಿಧ ಭಾಗಗಳು ಪಂಚಕೋಶಗಳೂ ಶುದ್ಧೀಕರಣಗೊಳ್ಳುತ್ತವೆ, ಹಾಗೂ ಪಂಚಪ್ರಾಣಗಳು ಹತೋಟಿಗೆ ಬರುತ್ತವೆ. ದೇಹ ಮನಸ್ಸು ನಿರ್ಮಲವಾಗಿ ಏಕಾಗ್ರತೆಗೆ ಸಹಕಾರಿಯಾಗುತ್ತದೆ.


ಕ್ರಿಯೆಗಳಲ್ಲಿ ಆರು ಪ್ರಧಾನ ಕ್ರಿಯೆಗಳಿವೆ (ಪಟ್ ಕ್ರಿಯೆಗಳು ಎಂದು ಹೆಸರಿದೆ)

1. ಕಪಾಲ ಭಾತಿ – (ಶ್ವಾಸ ಮಾರ್ಗ)

2. ತ್ರಾಟಕ – (ಕಣ್ಣುಗಳಿಗೆ)

3. ನೇತಿ – (ಮೂಗಿನಿಂದ ಗಂಟಲಿನ ತನಕ)

4. ಧೌತಿ – (ಜಠರ ಅನ್ನನಾಳ)

5. ನೌಳಿ - (ಹೊಟ್ಟೆಯ ಸ್ನಾಯುಗಳಿಗೆ)

6. ಬಸ್ತಿ – ಮಲಶೋಧನ ಕ್ರಿಯೆ


1. ಕಪಾಲ ಭಾತಿ

ಕಪಾಲ ಎಂದರೆ ತಲೆ ಬುರುಡೆ, ಭಾತಿ ಎಂದರೆ ಬೆಳಕು. ಮೆದುಳಿನ ಜೀವಕೋಶಗಳನ್ನು ಪ್ರಚೋದಿಸುವ ಕ್ರಿಯೆ ಇದಾಗಿದೆ. ಈ ಕ್ರಿಯೆಯನ್ನು ಅಧಿಕ ರಕ್ತದೊತ್ತಡ, ಹೃದಯ ದೌರ್ಬಲ್ಯ, ಬೆನ್ನು ನೋವು ಇದ್ದವರು ಮಾಡಬಾರದು. (ಗುರುಮುಖೇನನೇ ಕಲಿತು ಅಭ್ಯಾಸ ಮಾಡಬೇಕು).


ಅಭ್ಯಾಸ ಕ್ರಮ: ಯಾವುದಾದರೂ ಒಂದು ಭಂಗಿಯಲ್ಲಿ ನೆಟ್ಟಗೆ ನೇರವಾಗಿ ಹಾಯಾಗಿ ಕುಳಿತುಕೊಳ್ಳಬೇಕು. (ವಜ್ರಾಸನ, ಪದ್ಮಾಸನ, ಸುಖಾಸನ) ಒಮ್ಮೆ ದೀರ್ಘವಾಗಿ ಉಸಿರನ್ನು ಒಳಗೆ ತೆಗೆದುಕೊಂಡು ಸ್ಫೋಟದ ರೂಪದಲ್ಲಿ ರಭಸವಾಗಿ ಉಸಿರನ್ನು ಹೊರಹಾಕಬೇಕು. ಈ ಕ್ರಿಯೆಯನ್ನು ನಿಮಿಷಕ್ಕೆ 40 ಬಾರಿಯಿಂದ ಪ್ರಾರಂಭಿಸಿ ಅನಂತರ ಹೆಚ್ಚಿಸಬೇಕು. ಹೊಟ್ಟೆಯ ಮಾಂಸಖಂಡಗಳನ್ನು ತಿದಿ ಒತ್ತದಂತೆ ಹಿಂದೆ ವೇಗವಾಗಿ ಸೆಳೆಯಬೇಕು.


ಪ್ರಯೋಜನಗಳು: ಈ ಕಪಾಲ ಭಾತಿ ಕ್ರಿಯೆಯನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ರಕ್ತದಲ್ಲಿನ ಕಾರ್ಬನ್ ಡೈ ಆಕ್ಸೈಡ್ (ಇಂಗಾಲದಲ್ಲಿ) ಪೂರ್ತಿ ಹೊರ ಹೋಗಿ ಶ್ವಾಸ ಮಾರ್ಗವನ್ನು ಶುಚಿಗೊಳಿಸಿ, ಹೊಟ್ಟೆಯ ಒಳಗಿನ ಅಂಗಗಳು ಪುನಃಶ್ಛೇತನಗೊಳ್ಳುತ್ತವೆ. ಅಲ್ಲದೆ ಮಿದುಳಿನ ಜೀವಕೋಶಗಳಿಗೆ ಪ್ರಚೋದನೆ ಸಿಗುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಪರಿಹರಿಸಲು ಸಹಕಾರಿಯಾಗುತ್ತದೆ.


ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, 

ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‍ಪೆಕ್ಟರ್, ಅಂತರರಾಷ್ಟೀಯ ಯೋಗ ತೀರ್ಪುಗಾರರು,

“ಪಾರಿಜಾತ”, ಮನೆ ಸಂಖ್ಯೆ 2-72:5, ಬಿಷಪ್ ಕಂಪೌಂಡು,

ಫಿ.ಒ. ಕೊಂಚಾಡಿ, ಯೆಯ್ಯಾಡಿ ಪದವು, 

ಮಂಗಳೂರು-575 008 

ಮೊಬೈಲ್ ನಂಬ್ರ: 9448394987


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم