'ಅಜಿಲರು ತುಳುನಾಡ ಸಂಸ್ಕೃತಿ ರಕ್ಷಣೆಗೆ ಶ್ರಮಿಸಿದವರು'

Upayuktha
0

ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು 'ಮಾನುಷ' ಆಯೋಜಿಸುತ್ತಿರುವ ವೆಬಿನಾರ್ ಸರಣಿಯ 7ನೇ ಭಾಗವಾಗಿ ಶನಿವಾರ 'ತುಳುನಾಡಿನ ಅಜಿಲ ಅರಸು ಮನೆತನ' ಎಂಬ ವಿಷಯದ ಕುರಿತು ಜಾಲಗೋಷ್ಠಿ ನಡೆಯಿತು. 


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಜಿರೆ ಎಸ್‌ಡಿಎಂ ಕಾಲೇಜ್ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸನ್ಮತಿ ಕುಮಾರ್, ಅಜಿಲ ರಾಜ ಮನೆತನದ ಮೂಲ, ಆಳ್ವಿಕೆ ಮಾಡಿರುವ ಪ್ರದೇಶಗಳು, ವಿಶೇಷವಾಗಿ ವೇಣೂರಿನ ಸ್ಥಳನಾಮ ಮತ್ತು ಅಜಿಲ ಮನೆತನದ ಅರಸರ ಕುರಿತು ಮಾತನಾಡಿದರು.


“ಅಜಿಲರು ಪುರಾತನ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದವರು, ಅಲ್ಲದೆ  ದೇವಸ್ಥಾನ, ದೈವಸ್ಥಾನ ಮತ್ತು ಜಿನ ಮಂದಿರಗಳ ಉಳಿವಿಗೆ ವಿಶೇಷ ಆಸ್ಥೆ ವಹಿಸಿದವರು,” ಎಂದು ರಾಜಮನೆತನದ ಕೊಡುಗೆಯನ್ನು ಸ್ಮರಿಸಿದರು. 


ಕಾರ್ಯಕ್ರಮದ ಭಾಗವಾಗಿ ಅಜಿಲ ಮನೆತನದ ಕುರಿತ ಮಾಹಿತಿಯನ್ನು ಇತಿಹಾಸಾಕ್ತರು ಹಂಚಿಕೊಂಡರು. ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮ ಸರಣಿ ಜ್ಞಾನಾರ್ಜನೆಗೆ ನೆರವಾಗುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು. ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ ಕಾರ್ಯಕ್ರಮ ನಿರ್ವಹಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top