||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುನೀತ ಬದುಕು, ವಿನೀತ ನಡೆ: ಮರೆಯಲಾಗದ ಪುನೀತ್ ರಾಜ್‌ಕುಮಾರ್‌

ಪುನೀತ ಬದುಕು, ವಿನೀತ ನಡೆ: ಮರೆಯಲಾಗದ ಪುನೀತ್ ರಾಜ್‌ಕುಮಾರ್‌ಇಷ್ಟು ದುಃಖ ನನಗೆ ಯಾವತ್ತೂ ಆಗಿರಲಿಲ್ಲ. ಆತನ ಬದುಕು ಮತ್ತು ಸಿನೆಮಾ ಬೇರೆ ಬೇರೆ ಆಗಿರಲೇ ಇಲ್ಲ. 


ವರನಟ ಡಾಕ್ಟರ್ ರಾಜಕುಮಾರ್ ಅವರ ಅಷ್ಟೂ ದೈತ್ಯ ಪ್ರತಿಭೆಗಳನ್ನು ತನ್ನೊಳಗೆ ತುಂಬಿಸಿಕೊಂಡು ಬಂದ ನಟ ಪುನೀತ್ ರಾಜಕುಮಾರ್. ಮೊದಲು ಬಾಲನಟ ಆಗಿ ಬೆಟ್ಟದ ಹೂವು ಸಿನೆಮಾಕ್ಕೆ ಅತ್ಯುತ್ತಮ ಬಾಲ ನಟ  ರಾಷ್ಟ್ರ ಪ್ರಶಸ್ತಿ ಪಡೆದವರು ಅವರು. ಬಾಲನಟನಾಗಿ ಅವರದ್ದು ಅದ್ಭುತ ಇನ್ನಿಂಗ್ಸ್ ಎಂದೇ ಹೇಳಬಹುದು. 


ಮುಂದೆ ಮಾಸ್ ಹೀರೋ ಆಗಿ ಚಂದನವನಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟ ನಂತರ ಪುನೀತ್ ಅಭಿನಯದ ಹೆಚ್ಚು ಕಡಿಮೆ ಎಲ್ಲಾ ಸಿನೆಮಾಗಳು ಸೂಪರ್ ಹಿಟ್ ಆಗಿವೆ. ಒಬ್ಬ ನಟನ ಎಲ್ಲಾ ಸಿನೆಮಾಗಳನ್ನು ನಾನು ನೋಡಿದ ದಾಖಲೆ ಇದ್ದರೆ ಅದು ಪುನೀತ್ ಅವರದ್ದು ಮಾತ್ರ!


ಬರೇ ಮನರಂಜನೆಗಾಗಿ ಸಿನೆಮಾ ಮಾಡದೆ ಅದರ ಮೂಲಕ ಸಾಮಾಜಿಕ ಸಂದೇಶ ಮತ್ತು ಒಂದು ಮೆಗಾ ಅಪೀಲ್ ಕೊಡುವ ಅವರ ಸಿನಿಮಾಗಳದ್ದೇ ಒಂದು ತೂಕ! ರಾಜಕುಮಾರ ಕನ್ನಡ ಸಿನೆಮಾದಲ್ಲಿ ಅವರ ಪಾತ್ರ ಹೇಗಿತ್ತೋ ಅವರು ಹಾಗೆಯೇ ಬದುಕಿದವರು. ಇತ್ತೀಚೆಗೆ ಅತ್ಯುತ್ತಮವಾದ ಕನ್ನಡದ ಸಿನೆಮಾಗಳನ್ನು ನಿರ್ಮಾಣ ಮಾಡುವ ಸಂಸ್ಥೆಯನ್ನು ಸ್ಥಾಪನೆ ಮಾಡಿ ಅನೇಕ ಹೊಸ ಕಲಾವಿದರಿಗೆ ಅವಕಾಶ ಕೊಡುತ್ತಾ ಇದ್ದರು. 


ಹತ್ತಾರು ಅನಾಥಾಲಯ, ವೃದ್ಧಾಶ್ರಮ, ಶಾಲೆಗಳ ದತ್ತು ಸ್ವೀಕಾರ, 1800ಕ್ಕಿಂತ ಅಧಿಕ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ, ಗೋ ಶಾಲೆಗಳ ಅಭಿವೃದ್ಧಿ... ಹೀಗೆ ಅವರ ಸಾಮಾಜಿಕ ಕಳಕಳಿಗೆ ನೂರಾರು ಮುಖಗಳು. 


ನಟನಾಗಿ ಅವರು ಕನ್ನಡಕ್ಕೆ ನಿಜವಾದ ಗಾಡ್ಸ್ ಗ್ರೇಸ್ ಎಂದೇ ಹೇಳಬಹುದು. ಫೈಟಿಂಗ್, ಡಾನ್ಸ್, ಡೈಲಾಗ್, ಮ್ಯಾನರಿಸಂ, ಭಾವನೆಗಳು, ಸ್ಕ್ರೀನ್ ಅಪಿಯರೆನ್ಸ್ ಎಲ್ಲದರಲ್ಲೂ ಅವರಿಗೆ ಅವರೇ ಸಾಟಿ. ಅವರು ಹಾಡಿದ ಅಷ್ಟೂ ಹಾಡುಗಳು ಭಾರೀ ಜನಪ್ರಿಯ ಆಗಿವೆ.  


ತನ್ನ ಹಾಡುಗಳ ಮೂಲಕ ಬಂದ ಅಷ್ಟೂ ದುಡ್ಡನ್ನು ಮೈಸೂರಿನ ಒಂದು ಚಾರಿಟಬಲ್ ಟ್ರಸ್ಟಿಗೆ ವರ್ಗಾಯಿಸಿ ಪ್ರಚಾರದಿಂದ ಗಾವುದ ದೂರ ನಿಂತುಬಿಟ್ಟವರು ಇದೇ ಪುನೀತ್. ತನ್ನ ತಂದೆಯವರ ಹಾಗೆ ತನ್ನ ಸಿನೆಮಾಗಳು ಹಾಗೂ ಮಾದರಿ ಬದುಕಿನ ಮೂಲಕ ಬಹು ಎತ್ತರದಲ್ಲಿ ನಿಂತವರು ಪುನೀತ್. ಕನ್ನಡದ ಕೋಟ್ಯಾಧಿಪತಿ ಸಂಚಿಕೆಗಳಿಗೆ ಅವರು ತುಂಬಿಸಿದ ಎನರ್ಜಿ ಎಷ್ಟು ಅದ್ಭುತ! 


ಯಾವ ರೀತಿಯ ಪಾತ್ರಕ್ಕೂ ನ್ಯಾಯವನ್ನು ಒದಗಿಸುವ ಒಬ್ಬ ವರ್ಸೇಟೇಲ್ ನಟನನ್ನು ಹಾಗೂ ಒಬ್ಬ ಮಾನವೀಯ ಅಂತಃಕರಣದ ಸಹೃದಯಿ ಗೆಳೆಯನನ್ನು ನಾವಿಂದು ಕಳೆದುಕೊಂಡಿದ್ದೇವೆ. 

ಈ ದುಃಖವು ಎಂದಿಗೂ ಮರೆತು ಹೋಗುವುದಿಲ್ಲ, ಅವರ ಸಿನಿಮಾಗಳ ಹಾಗೆ!

-ರಾಜೇಂದ್ರ ಭಟ್ ಕೆ.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post